ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಡೆವಿಲ್ ಚಿತ್ರದಲ್ಲಿ ಬ್ಯುಸಿ ಆಗಿರೋದು ಎಲ್ಲರಿಗೂ ಗೊತ್ತೇ ಇದೆ ಅಷ್ಟೇ ಅಲ್ಲದೆ ಚಿತ್ರದ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ಕೂಡ ಕೊಟ್ಟಾಗಿದೆ. ಆದರೂ ಕೂಡ ನಟ ವಿದೇಶಕ್ಕೆ ಹೋಗದೆ ಕುಳಿತಿರೋದು ಯಾಕೆ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ನಟ ದರ್ಶನ್ ಡೆವಿಲ್ ಚಿತ್ರದ ಸಾಂಗ್ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಬೇಕು ಅನುಮತಿ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ದರ್ಶನ್ ಅರ್ಜಿ ವಿಚಾರಣೆ ನಡೆಸಿದ ಪೀಠವು ಜೂನ್ 1 ರಿಂದ 25ರ ವರೆಗೆ ವಿದೇಶಕ್ಕೆ ತೆರಳಲು ಅನುಮತಿಯನ್ನು ಕೂಡ ನೀಡಿತ್ತು.
ಆದರೆ ಕೋರ್ಟ್ ನಿಂದ ಅನುಮತಿ ಸಿಕ್ಕಿ ಹತ್ತು ದಿನವಾದರೂ ಕೂಡ ಇನ್ನು ಡೆವಿಲ್ ತಂಡ ವಿದೇಶಕ್ಕೆ ಹೋಗಿಲ್ಲ ಎಂದು ತಿಳಿದು ಬಂದಿದೆ. ನಟ ದರ್ಶನ್ ಚಿತ್ರದ ಸಾಂಗ್ ಶೂಟಿಂಗ್ ಗಾಗಿ ದುಬೈ, ಸ್ವಿಟ್ಜರ್ಲ್ಯಾಂಡ್ ಸೇರಿದಂತೆ ಕೆಲ ಯುರೋಪಿಯನ್ ದೇಶದಲ್ಲಿ ಮಾಡಲು ಪ್ಲಾನ್ ಮಾಡಿತ್ತು. ಆದರೆ ಇದೀಗ ದರ್ಶನ್ ವೀಸಾ ರಿಜೆಕ್ಟ್ ಆಗಿದೆ.
ಯುರೋಪಿಯನ್ ರಾಷ್ಟ್ರಗಳು ತಮ್ಮ ದೇಶಕ್ಕೆ ಬರುವ ಪ್ರವಾಸಿಗರ ಹಿನ್ನಲೆಯನ್ನು ವೀಸಾ ನೀಡುವ ಮುನ್ನ ಚೆಕ್ ಮಾಡಲಾಗುತ್ತದೆ. ಅದರಂತೆ ದರ್ಶನ್ ಅವರ ಹಿನ್ನಲೆಯನ್ನು ಚೆಕ್ ಮಾಡಿದೆ. ಈ ವೇಳೆ ದರ್ಶನ್ ಹೆಸರಿನಲ್ಲಿ ಕೊಲೆ ಆರೋಪ ಇದ್ದರಿಂದ ಅವರ ವೀಸಾ ರಿಜೆಕ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೋರ್ಟ್ ನೀಡಿದ 25 ದಿನಗಳ ಟೈಮ್ ಲೈನ್ ನಲ್ಲಿ ಈಗಾಗಲೇ 10 ದಿನಗಳು ಕಳೆದಿದ್ದು, ಇನ್ನುಳಿದ 15 ದಿನದಲ್ಲಿ ಚಿತ್ರ ತಂಡ ಏನು ಮಾಡುತ್ತದೆ ಎಂದು ಕಾದುನೋಡಬೇಕಿದೆ.

