ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಎಲ್ಲ ಆರೋಪಿಗಳ ದೋಷಾರೋಪಣೆ ನಿಗದಿ ಪ್ರಕ್ರಿಯೆ ನಡೆದಿದೆ. ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಎಲ್ಲ ಆರೋಪಿಗಳು ಇಂದು (ನವೆಂಬರ್ 3) ಹಾಜರಾದರು.
ದರ್ಶನ್ , ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಕೂಡ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗಾಗಿ ಮುಂದಿನ ಹಂತದ ಸಾಕ್ಷಿಗಳ ವಿಚಾರಣೆಗೆ ನ್ಯಾಯಾಲಯ ದಿನಾಂಕ ನಿಗದಿ ಮಾಡಿದೆ. ನವೆಂಬರ್ 10ರಂದು ವಿಚಾರಣೆಗೆ ದಿನಾಂಕ ನಿಗದಿ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಚಾರ್ಜ್ ಫ್ರೇಮ್ ಮಾಡಲಾಗಿದೆ. ಆರೋಪ ನಿರಾಕರಿಸಿರುವ ಕಾರಣ ನವೆಂಬರ್ 10 ರಿಂದ ವಿಚಾರಣೆ ಆರಂಭಗೊಳ್ಳುತ್ತಿದೆ. ಇತ್ತ ಎಲ್ಲಾ ಆರೋಪಿಗಳ ಜೊತೆ ಮಾತನಾಡಲು ವಕೀಲರು ಅವಕಾಶ ಕೋರಿದ್ದಾರೆ. ಇದರ ನಡುವೆ ಚಾರ್ಜ್ ಫ್ರೇಮ್ ದಾಖಲೆಗೆ ಎಲ್ಲಾ ಆರೋಪಿಗಳಿಂದ ಕೋರ್ಟ್ ಆಫೀಸರ್ ಸಹಿ ಪಡೆಯಲಿದ್ದಾರೆ. ಸಹಿ ಪಡೆದ ಬಳಿಕ ದರ್ಶನ್ ಸೇರಿ 7ಆರೋಪಿಗಳು ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸರು ಬಾರಿ ಭಿಗಿ ಭದ್ರತೆಯಲ್ಲಿ ಆರೋಪಿಗಳನ್ನು 57ನೇ ಸೆಷನ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬಳಿಕ ಜಡ್ಜ್ ಐ.ಪಿ.ನಾಯ್ಕ್, ಎಲ್ಲಾ ಆರೋಪಿಗಳ ಹೆಸರು ಕೂಗಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳ ದೋಷಾರೋಪ ಪಟ್ಟಿ ಓದಿದ್ದಾದರೆ.
ರೇಣುಕಾಸ್ವಾಮಿ ಯನ್ನ ಕಿಡ್ನಾಪ್ ಮಾಡಿ ಶೆಡ್ ಗೆ ಕರೆತಂದು ಹಲ್ಲೆ ಮಾಡಿರುವುದು, ಚಪ್ಪಲಿಯಲ್ಲಿ ಹೊಡೆದಿರುವುದು, ಯಾಕೆ ಮೆಸೇಜ್ ಮಾಡಿದ್ದೀಯಾ ಎಂದು ಹೊಡೆದು ಅವಮಾನ ಮಾಡಿದ್ದೀರಿ. ಚಪ್ಪಲಿಯಿಂದ ಮರದ ದಿಮ್ಮಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಿರಿ.ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿ ಎ2 ದರ್ಶನ್ ಹಲ್ಲೆ ಮಾಡಿ ಕೊಲೆ ಮಾಡಿದ್ದಿರಿ. ಕೊಲೆ ಬಳಿಕ ಕೆಲವರಿಗೆ ಹಣ ಆಸೆ ತೊರಿಸಿ ತಪ್ಪು ಒಪ್ಪಿಕೊಳ್ಳುವಂತೆ ಸಂಚು ರೂಪಿಸಿದ್ದೀರಿ ಎಂದು ಜಡ್ಜ್ ದೋಷಾರೋಪ ಓದಿದ್ದಾರೆ.
ಸ್ನೇಹಿತೆ ಸಮತಾಗೆ ತಿಳಿಸಿ ಸಾಕ್ಷಿ ನಾಶ ಮಾಡುವ ಯತ್ನ ಮಾಡಿದ್ದೀರಿ. 2ನೇ ಆರೋಪಿಯಿಂದ 17ನೇ ಆರೋಪಿ ಜತೆ ಸೇರಿ ಒಳಸಂಚು ಮಾಡಿದ್ದೀರಿ ಎಂದು ಜಡ್ಜ್ ದೋಷಾರೋಪ ಪಟ್ಟಿ ಓದಿದ್ದಾರೆ. ಈ ವೇಳೆ ಇದೆಲ್ಲಾ ಸುಳ್ಳು ಎಂದು ಎಲ್ಲಾ 17 ಆರೋಪಿಗಳು ಹೇಳಿದ್ದಾರೆ.

