ಕುಣಿಗಲ್ :- ತಾಲೂಕಿನ ಶೆಟ್ಟಿ ಬೀಡು ಗ್ರಾಮದಲ್ಲಿ 10- 15 ವರ್ಷಗಳಿಂದ ರಸ್ತೆಗಳಲ್ಲಿ ತುಂಬಿಕೊಂಡಿರುವ ಗುಂಡಿಗಳು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸವಾಲು ಎದುರಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ,,
ಮೂರು ತಾಲೂಕಿಗೂ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ನಗರ ಪ್ರದೇಶ ದಾಟಿಕೊಂಡು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿದರೆ ನಿಮ್ಮನ್ನು ದೊಡ್ಡ ಗುಂಡಿಗಳು ದುರಸ್ತಿಗೆ ಕಾದಿರುವ ರಸ್ತೆಗಳು ಇಲ್ಲಿ ರಸ್ತೆ ಇದೆಯೇ? ಎನ್ನುವ ಅನುಮಾನ ಮೂಡಿಸುವ ಪ್ರಶ್ನೆಗಳು ಕಾಡುತ್ತವೆ ಎಂದು ಅಲ್ಲಿನ ಗ್ರಾಮಸ್ಥರಾದ ನರಸಿಂಹಮೂರ್ತಿ ತಿಳಿಸಿದ್ದಾರೆ,,
ಇನ್ನು ಗ್ರಾಮೀಣ ರಸ್ತೆಗಳ ಪರಿಸ್ಥಿತಿ ನೋಡಿದರೆ ಯಾವ ಜನಪ್ರತಿನಿಧಿಗಳು ಕೂಡ ಈ ಭಾಗದಲ್ಲಿ ಮುಖ ಮಾಡಿ ನೋಡಿಲ್ಲ, ಎಲೆಕ್ಷನ್ ಬರುವ ಸಂದರ್ಭದಲ್ಲಿ ಮಾತ್ರ ವೋಟ್ ಗಾಗಿ ಗ್ರಾಮೀಣಗಳಿಗೆ ಬರುತ್ತಾರೆ, ನಂತರ ಈ ಮಾರ್ಗವಾಗಿ ಇದುವರೆಗೂ ಯಾರು ಸಹ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು,,
ಈ ಹಿಂದೆ ಲೋಕಸಭಾ ಸದಸ್ಯರಾದ ಡಿಕೆ ಸುರೇಶ್ ರವರು ಅದ್ಭುತವಾಗಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು, ನಂತರ ನೂತನ ಲೋಕಸಭಾ ಸದಸ್ಯರಾದ ಡಾ ” ಸಿಎನ್ ಮಂಜುನಾಥ್‍ರವರು ನಮ್ಮ ಗ್ರಾಮದ ಕಡೆ ಒಂದು ಬಾರಿ ಸಹ ತಿರುಗಿಯು ನೋಡಿಲ್ಲ, ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು,ಹಾಗೂ ವಯೋವೃದ್ಧರು, ಬಾಣಂತಿಯರು, ಇದೇ ರಸ್ತೆಯಲ್ಲಿ ಓಡಾಡುತ್ತಾರೆ, ಗ್ರಾಮಸ್ಥರ ಕಷ್ಟಗಳನ್ನು ಕೇಳುವುದರಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಹಾರವಾಗಿದೆ ಎಂದು ಕಿಡಿ ಕಾರಿದರು,,
ಕುಣಿಗಲ್ ತಾಲೂಕಿನ ವಿವಿಧ ಗ್ರಾಮಗಳಿಂದ ಸಿಎಸ್ ಪುರ ಗುಬ್ಬಿ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಅತ್ಯಂತ ನಿರ್ಲಕ್ಷ್ಯಕ್ಕೀೀಡಾಗಿ, ದುಸ್ಥಿತಿಯಲ್ಲಿರುವುದಕ್ಕೆ, ಆ ಭಾಗದ ಜನ ನಿತ್ಯ ಶಪಿಸುವಂತಾಗಿದೆ,,
ಕುಣಿಗಲ್ ತಾಲೂಕಿನ ಅನೇಕ ಹಳ್ಳಿಗಳಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಬಹುದಾಗಿದ್ದ ಈ ರಸ್ತೆ ರಾಜಕಾರಣಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಉದಾಸೀನಕ್ಕೆ ಉತ್ತಮ ಉದಾಹರಣೆಯು ಹೌದು, ಅನೇಕ ವರ್ಷಗಳಿಂದ ಈ ರಸ್ತೆಯಲ್ಲಿ ಅಲ್ಲಲ್ಲಿ ಕಟಾಕ್ಷರಕ್ಕೆ ಮಣ್ಣು ಜಲ್ಲಿಕಲ್ಲು ಹಾಕುವುದು ಸಾಮಾನ್ಯ ಸಂಗತಿ, ಕಲ್ಲುಗಳು ಎದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದರೆ ಹೊಲ ಮನೆಗೆ ಹೋಗಲು ಬಳಸುವ ರೈತರ ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ಅಲ್ಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು ,,
ಕಲ್ಲುಗಳು ಎದ್ದಿರುವುದರಿಂದ ನಡೆದಾಡುವ ಜನರು ಮತ್ತು ಜಾನುವಾರುಗಳ ಕಾಲುಗಳಿಗೆ ಗಾಯಗಳಾಗುತ್ತಿವೆ, ರಸ್ತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಬಂದರೆ ಮಧ್ಯದಲ್ಲಿ ಬರುವ ಹಳ್ಳಿಗಳ ಜನರಿಗೆ ಕಡಿಮೆ ಅವಧಿಯಲ್ಲಿ ಎರಡು ತಾಲೂಕು, ಕೇಂದ್ರಗಳಿಗೆ ಹೋಗಿಬರುವುದಕ್ಕೆ ಅನುಕೂಲವಾಗುತ್ತದೆ ಅಲ್ಲಿನ ಗ್ರಾಮಸ್ಥರು ತಿಳಿಸಿದರು,,,
ಶೆಟ್ಟಿ ಬಿಡು ಸಿಎಸ್ ಪುರ ಸಂಪರ್ಕಿಸುವ ಪ್ರಮುಖರಸ್ತೆ ಇದಾಗಿದೆ ರಸ್ತೆ ಅಭಿವೃದ್ಧಿಯಿಂದ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಲಿದೆ, ಆದಷ್ಟು ಬೇಗ ನಮ್ಮ ತಾಲೂಕಿನ ಶಾಸಕರ ಮೇಲೆ ಅಪಾರವಾದ ನಂಬಿಕೆಯನ್ನು ನಮ್ಮ ಗ್ರಾಮಸ್ಥರು ಇಟ್ಟುಕೊಂಡಿದ್ದೇವೆ, ಶಾಲಾ ಮಕ್ಕಳು ಹಾಗೂ ವಯೋವೃದ್ದರಿಗೆ, ಅನುಕೂಲ ವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಅವರಿಗೆಪುಣ್ಯ ಬರುತ್ತದೆ ಎಂದು ಮಾತನಾಡಿದರು,,
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಗೋಪಾಲಯ್ಯ, ಶಿವಲಿಂಗಯ್ಯ, ಕುಮಾರ್, ಲೋಕೇಶ್, ರಾಜಣ್ಣ, ಹೋಟೆಲ್ ಮಂಜಮ್ಮ, ಬೋರೇಗೌಡ, ನಾರಾಯಣ, ಮಧು, ಸೇರಿದಂತೆ ಹಲವಾರು ಗ್ರಾಮಸ್ಥರು ಹಾಜರಿದ್ದರು,,
ವರದಿ : ನರಸಿಂಹರಾಜು

