ಜೆದ್ದಾ : ಈ ವರ್ಷದ ಹಜ್ ಯಾತ್ರೆಗೆ ಮುಂಚಿತವಾಗಿ ಭಾರತ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಇಥಿಯೋಪಿಯಾ, ಟುನೀಶಿಯಾ, ಯೆಮೆನ್ ಮತ್ತು ಮೊರಾಕೊ.
ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ಸೌದಿ ಅರೇಬಿಯಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಜ್ ಅಂತ್ಯದೊಂದಿಗೆ ಹೊಂದಿಕೆಯಾಗುವ 2025ರ ಜೂನ್ ಮಧ್ಯಭಾಗದವರೆಗೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ಭೇಟಿ ವೀಸಾಗಳನ್ನು ನೀಡುವುದಕ್ಕೆ ಸರ್ಕಾರ ತಡೆಯೊಡ್ದಿದೆ ಎಂದು ವರದಿಯಾಗಿದೆ.
ವೀಸಾ ನಿಯಮಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪರಿಷ್ಕೃತ ನಿಯಮಗಳ ಪ್ರಕಾರ, ಏಪ್ರಿಲ್ 13, 2025 ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನಂತರ ಹಜ್ ಮುಗಿಯುವವರೆಗೆ ಯಾವುದೇ ಹೊಸ ಉಮ್ರಾ ವೀಸಾಗಳನ್ನು ನೀಡಲಾಗುವುದಿಲ್ಲ.
ಹಜ್ ಸಮಯದಲ್ಲಿ ಯಾರಾದರು ಅಕ್ರಮವಾಗಿ ಉಳಿದುಕೊಂಡರೆ, ಅಂತವರು ಸೌದಿ ಅರೇಬಿಯಾಕ್ಕೆ ಮರು ಪ್ರವೇಶಿಸಲು ಐದು ವರ್ಷಗಳ ನಿಷೇಧ ಮತ್ತು 10,000 ಸೌದಿ ರಿಯಾಲ್‌ಗಳ ದಂಡವನ್ನು ವಿಧಿಸಲಾಗುವುದು ಅಧಿಕಾರಿಗಳು ಎಚ್ಚರಿಸಿದ್ದಾರೆ.

