ಬಾಲಿವುಡ್ ನಟಿ ಶಿಲ್ಪ ಶೆಟ್ಟಿ (Shilpa Shetty) ಹಾಗೂ ಉದ್ಯಮಿ ರಾಜ್ ಕುಂದ್ರಾ (Raj kundra) ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾರಿ ನಿದೇರ್ಶನಾಲಯ (ED) ಬರೋಬ್ಬರಿ ಸುಮಾರು 98 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ಶಿಲ್ಪಾ ಶೆಟ್ಟಿ ಅವರು ಫ್ಲಾಟ್ ಅನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರನ ತನಿಖೆ ನಡೆಸುತ್ತಿರುವ ಇಡಿ ಎಂದು ರಾಕ್ ಕುಂದ್ರ ಅವರಿಗೆ ಸಂಬಂಧ ಪಟ್ಟ್ 97. 79 ರೂ ಆಸ್ತಿಯನ್ನು ಜಪ್ತಿ ಮಾಡಿದ್ದು, ಜೊತೆಗೆ ಮುಂಬೈನ ಜುಹುನಲ್ಲಿ ಶಲ್ಪಾ ಶೆಟ್ಟಿ ಹೆಸರಿನಲ್ಲಿರುವ ಫ್ಲಾಟ್ ಅನ್ನು ಸಹ ವಶಕ್ಕೆ ಪಡೆಯಾಲಾಗಿದೆ. ಇದನ್ನೂ ಓದಿ: ಐಸ್‌ಕ್ರೀಂ ತಿಂದು ಅವಳಿ ಮಕ್ಕಳ ಅನುಮಾನಾಸ್ಪದ ಸಾವು
ಏನಿದು ಪ್ರಕರಣ ?
2017 ರಲ್ಲಿ ಇ.ಡಿ ಅಧಿಕಾರಿಗಳು ಬಿಟ್ ಕಾಯಿನ್ ಅಲ್ಲಿ ಸುಮಾರು 6,600 ಕೋಟಿ ರೂ ಹಣ ವರ್ಗವಣೆ ಮಾಡಿದ ಆರೋಪದಲ್ಲಿ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಬಿಟ್‌ಕಾಯಿನ್ ಮೂಲಕ ಹಲವರಿಗೆ ಶೇಕಡಾ 10 ರಷ್ಟು ಹಣ ರಿಟರ್ನ್ ಮಾಡುವ ಭರವಸೆ ನೀಢಿ ಮೋಶ ಮಾಡಿದ ಆರೋಪ ಕೇಳಿ ಬಂದಿತ್ತು. ಇದೇ ಹಗರಣದಲ್ಲಿ ತನಿಖೆ ನಡೆಸಿದ ಜಾರಿ ನಿದೇರ್ಶನಾಲಯ ಇದೀಗ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: ಕೈ ಅಧಿಕಾರಕ್ಕೆ ಬಂದರೆ ದೇಶದ್ಯಾಂತ ಜಾತಿ ಗಣತಿ: ರಾಹುಲ್ ಗಾಂಧಿ

ಉದ್ಯಮಿ ಹಾಗೂ ಬಾಲಿವುಡ್ ನಟ ರಾಜ್ ಕುಂದ್ರಾ ಅವರನ್ನು ಬಿಟ್‌ಕಾಯಿನ್ ಸೇರಿದಂತೆ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ರ‍್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು. ರಾಜ್ ಕುಂದ್ರಾ ಅವರಿಗೆ ಸಂಬಂಧಪಟ್ಟ ಸ್ಥಿರ ಮತ್ತು ಚರ ಆಸ್ತಿಯ ಜೊತೆಗೆ ಪುಣೆಯಲ್ಲಿರುವ ಬಂಗ್ಲೆ ಮತ್ತು ಷೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೇಸರಿ ಕಿಚ್ಚು, ತೆರೇಸಾ ಶಾಲೆ ವಿರುದ್ಧ ದಂಗೆ ಎದ್ದ ಹಿಂದೂ ಸಂಘಟನೆ