ಕುಣಿಗಲ್ :- ತಾಲೂಕಿನ ಯಡಿಯೂರು ಹೋಬಳಿಯಲ್ಲಿ ಸೊಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣವಾಗಿದ್ದರು ವೈದ್ಯರಿಲ್ಲದೆ ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ,,
5 -6 ವರ್ಷಗಳಿಂದ ವೈದ್ಯರ ಕೊರತೆ:
ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ರೋಗಿಗಳು ಅಗತ್ಯ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ, ಯಡಿಯೂರಿನಲ್ಲಿ ಉತ್ತಮ ಸರ್ಕಾರಿ ಹಾಗೂ ಖಾಸಗಿ ‘ವೈದ್ಯರಿಲ್ಲದ ‘ಕಾರಣ ಗ್ರಾಮೀಣ ಪ್ರದೇಶದಲ್ಲಿ ರೋಗಿಗಳ ಬಗ್ಗೆ ಜಾಗೃತಿ ಕೊರತೆ ಇದೆ,ಹೀಗಾಗಿ ಜನಸಾಮಾನ್ಯರನ್ನು ಸಾಕಷ್ಟು ರೋಗಿಗಳು ಆವರಿಸಿಕೊಳ್ಳುತ್ತಿವೆ,
ಇದು ಹೋಬಳಿ ಕೇಂದ್ರವಾಗಿರುವುದರಿಂದ ಗ್ರಾಮೀಣ ಭಾಗದ ಜನರು ಚಿಕಿತ್ಸೆಗಾಗಿ, ಆರೋಗ್ಯ ಕೇಂದ್ರ ನಂಬಿಕೊಂಡು ಬರುತ್ತಾರೆ ಆದರೆ ಇಲ್ಲಿ, ವೈದ್ಯರ ಕೊರತೆ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,,
ರೋಗಿಗಳಿಗೆ ಸಕಾಲಕ್ಕೆ ಸರಿಯಾಗಿ ಆಂಬುಲೆನ್ಸ್ ದೊರಕುತ್ತಿಲ್ಲದಿರುವುದು ವಿಪರ್ಯಾಸವಾಗಿದೆ, ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುವುದು ಅತ್ಯವಶ್ಯಕವಾಗಿದೆ, ನಮ್ಮತಾಲೂಕಿನ ಶಾಸಕರು ಕೂಡ ಅತ್ಯುತ್ತಮವಾದ ವೈದ್ಯರು, ಇಲ್ಲಿನ ಅವ್ಯವಸ್ಥೆಯ ಬಗ್ಗೆ ಆದಷ್ಟು ಬೇಗ ಹೆಚ್ಚಿನ ಗಮನಹರಿಸಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ತಿಳಿಸಿದ್ದಾರೆ,,
ಕನಿಷ್ಠ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳನ್ನು ನಿಯೋಜಿಸಿದರೆ ಆಸ್ಪತ್ರೆಗೆ ಬರುವ ರೋಗಿಗಳ ಪರದಾಟ ತಪ್ಪುತ್ತದೆ ಎಂಬುದು ಗ್ರಾಮಸ್ಥರ ಅಳಲಾಗಿದೆ, ಆರೋಗ್ಯ ಕೇಂದ್ರದಲ್ಲಿ ಬ್ಯಾಂಡೇಜ್, ಆಯ್ಂಟ್ಮೆಂಟ್, ಹಲವು ಇತ್ಯಾದಿ ರೋಗಿಗಳಿಗೆ ಅನುಕೂಲವಾಗುವಂತೆ ಯಾವುದೂ ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು,, ಇಷ್ಟಾದರೂ ಈವರೆಗೂ ಕೇಂದ್ರಕ್ಕೆ ಯಾವುದೇ ವೈದ್ಯರಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ, ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಬಗ್ಗೆ ನಾಗರಿಕರು ತೀವ್ರ ಬೇಸತ್ತಿದ್ದಾರೆ,,
ಅಂಬುಲೆನ್ಸ್ ಸೌಲಭ್ಯವಿಲ್ಲ :
ಹಗಲಿನಲ್ಲೇ ವೈದ್ಯರು ಇರುವುದಿಲ್ಲ,ಇನ್ನು ರಾತ್ರಿ ಕೇಳಬೇಕೆ, ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ, ಅದರಲ್ಲೂ ಹೆದ್ದಾರಿ ಪಕ್ಕದಲ್ಲಿ ಇರುವ ಆಸ್ಪತ್ರೆ ಇದಾಗಿದೆ,ಈ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗುವುದು ಕಷ್ಟಕರವಾಗಿದೆ, ನಾಯಿ, ಹಾವು,ಕಡಿತಕ್ಕೆ ಔಷಧಿ ಇದ್ದರೂ ಕೊಡುವ ವೈದ್ಯರಿಲ್ಲ, ಈ ಆರೋಗ್ಯ ಕೇಂದ್ರದಲ್ಲಿ ಯಾವ ಸೇವಾ ಸೌಲಭ್ಯವಿಲ್ಲ ಎಂಬ ವಿಚಾರದ ಬಗ್ಗೆ ಮಾಹಿತಿ ಫಲಕವನ್ನು ಅಳವಡಿಸಿಲ್ಲ, ಆಂಬುಲೆನ್ಸ್ ಸೇವೆ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ಬಂದಿದೆ, ತುರ್ತು ಸಂದರ್ಭದಲ್ಲಿ ಕುಣಿಗಲ್ ನಿಂದ ಆಂಬುಲೆನ್ಸ್ ಕರೆಸುವ ಪರಿಸ್ಥಿತಿ ಉಂಟಾಗಿದೆ, ಆದಷ್ಟು ಬೇಗ ಈ ಆಸ್ಪತ್ರೆಗೆ ಸೂಕ್ತ ವೈದ್ಯರನ್ನು ನೇಮಕ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ, ಮತ್ತು ಇಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯವರಿಗೆ ರಾತ್ರಿ ಪಾಳಿಯಲ್ಲಿ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ,,,
ವರದಿ ನರಸಿಂಹರಾಜು

