SSLC ಪರೀಕ್ಷೆಯಲ್ಲಿ 625 ಅಂಕಗಳಿಗೆ 618 ಅಂಕಗಳನ್ನು ಪಡೆದು ತೋವಿನಕೆರೆಯ ಗ್ರಾಮಕ್ಕೆ ಕೀರ್ತಿ ತಂದಿರುವುದು ಒಂದು ಹೆಮ್ಮೆಯ ವಿಷಯ, ಶೇಕಡವಾರು 98.88 % ಅಂಕ ಪಡೆದಿದ್ದು ಉತ್ತೀರ್ಣರಾಗಿದ್ದಾರೆ.
ಆದಕಾರಣ ರಾಷ್ಟ್ರೀಯ ಮಾನವ ಹಕ್ಕುಗಳ ತನಿಕಾ ಸಮಿತಿ ವತಿಯಿಂದ ಸೃಜನ್ ಅವರ ಮನೆಗೆ ರಾಜ್ಯಧ್ಯಕ್ಷರಾದ ಸಂತೋಷ್ ಕೆ ರವರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರಾದ ಶೇಕ್ ಮಹಮದ್ ಮತ್ತು ತಾಲೂಕು ಅಧ್ಯಕ್ಷರಾದ ಗೋವಿಂದರಾಜು ಆರ್ ಅವರ ನೇತೃತ್ವದಲ್ಲಿ ಶಾಲುವೊದಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಗೌರವದಕ್ಷರದ ಮುಜಾಯಿತ್ ಪಾಶ, ಜಿಲ್ಲಾಕಾರ್ಯಧ್ಯಕ್ಷರಾದ ರಘುನಂದನ್ ಟಿ ಆರ್, ತಾಲೂಕು ಉಪಾಧ್ಯಕ್ಷರಾದ ವಿನಯ್ ಶಶಿ, ಪ್ರಧಾನ ಕಾರ್ಯದರ್ಶಿಯಾದ ಬೋಜರಾಜು, ಸಹ ಕಾರ್ಯದರ್ಶಿಯಾದ ಮಂಜುನಾಥ್, ಜಂಟಿ ಕಾರ್ಯದರ್ಶಿ ಸುದರ್ಶನ್, ಹಾಗೂ ಆ ವಿದ್ಯಾರ್ಥಿಯ ತಂದೆ-ತಾಯಿಗಳು ಉಪಸ್ಥಿತರಿದ್ದರು.

