ಬೆಂಗಳೂರು: ಸುಮಲತಾ ಅಂಬರೀಶ್ (Sumalatha Ambareesh) ಅವರ ಮಂಡ್ಯ (Mandya) ಪ್ರಚಾರ ರದ್ದಾಗಿದೆ.
ಇಂದು ನಡೆಯಬೇಕಾಗಿದ್ದ ಪ್ರಚಾರದ ಬಗ್ಗೆ ಪಕ್ಷದಿಂದ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸದ ಕಾರಣ ರದ್ದಾಗಿದೆ. ಸುಮಲತಾ ಅವರು ಮಂಡ್ಯಕ್ಕೆ ತೆರಳದೇ ಬೆಂಗಳೂರಿನಲ್ಲಿ (Bengaluru) ಉಳಿದಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಕಾಂಗ್ರೆಸ್ ನೀಡಿರುವ ದೂರು ಪರಿಗಣನೆಯಲ್ಲಿದೆ : ಚುನಾವಣಾ ಆಯೋಗ
ಲೋಕಸಭಾ ಚುನಾವಣೆಯಲ್ಲಿ ಇಂದು ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಅವರ ಪರ ಸುಮಲತಾ ಅಂಬರೀಶ್ ಅವರು ಮತಯಾಚನೆ ಮಾಡುವ ಕಾರ್ಯಕ್ರಮ ಮಂಗಳವಾರ ನಿಗದಿಯಾಗಿತ್ತು. ಸುಮಲತಾ ಅವರು ಮಂಡ್ಯ ಸಂಸದೆಯಾಗಿ ಇಲ್ಲಿಯವರೆಗೆ ಹೆಚ್‌ಡಿಕೆ ಜೊತೆ ಪ್ರಚಾರದಲ್ಲಿ ಕಾಣಿಸಿಲ್ಲ. ಇದನ್ನೂ ಓದಿ: ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ: ಧಗಧಗ ಹೊತ್ತಿ ಉರಿದ ಬಸ್- ಸ್ಥಳದಲ್ಲೇ ಇಬ್ಬರು ಸಾವು
ಸುಮಲತಾ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ನಿಂತಿದ್ದಾಗ ಬಿಜೆಪಿ ಬೆಂಬಲ ನೀಡಿತ್ತು. ಈ ಬಾರಿ ಸುಮಲತಾ ಮಂಡ್ಯ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಡಾ. ರಾಜ್‌ಕುಮಾರ್ 95 ನೇ ವರ್ಷದ ಹುಟ್ಟುಹಬ್ಬ ಇಂದು