ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರಿಂ ಕೋರ್ಟ್ ಮೊದಲ ಬಾರಿಗೆ ತನ್ನ ಒಟ್ಟು 33 ನ್ಯಾಯಾಧೀಶರ ಪೈಕಿ 21 ಜನರ ಆಸ್ತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮೇ 13 ರಂದು ನಿವೃತ್ತರಾಗಲಿದ್ದು ಸೇವೆಯಿಂದ ನಿವೃತ್ತಿಯಾಗಲು ಒಂದು ವಾರ ಬಾಕಿ ಇರುವಾಗ ನ್ಯಾಯಾಧೀಶರ ಆಸ್ತಿಗಳ ವಿವರ ಪ್ರಕಟವಾಗಿದೆ.
ಆಸ್ತಿ ಮಾಹಿತಿಯ ಜೊತೆಗೆ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನೇಮಕಾತಿಗಳ ಸಂಪೂರ್ಣ ಪ್ರಕ್ರಿಯೆಯನ್ನು ಹೈಕೋರ್ಟ್ ಕೊಲಿಜಿಯಂಗೆ ನಿಯೋಜಿಸಲಾದ ಪಾತ್ರ, ರಾಜ್ಯ ಸರ್ಕಾರಗಳು, ಭಾರತ ಸರ್ಕಾರದಿಂದ ಪಡೆದ ಪಾತ್ರ ಮತ್ತು ಇನ್‌ಪುಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂನ ಪರಿಗಣನೆಯ ಪತ್ರವನ್ನು ಪ್ರಕಟಿಸಿಲಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಹಿಳಾ ನ್ಯಾಯಾಧೀಶರ ಪೈಕಿ ನ್ಯಾ.ಬೇಲಾ ಎಂ. ತ್ರಿವೇದಿ ತಮ್ಮ ಆಸ್ತಿಯನ್ನು ಪ್ರಕಟಿಸಿದ್ದಾರೆ ಆದರೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಆಸ್ತಿ ಇನ್ನೂ ಅಪ್‌ಲೋಡ್ ಆಗಿಲ್ಲ. ಬಾರ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಬಡ್ತಿ ಪಡೆದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಕೆ.ವಿ. ವಿಶ್ವನಾಥನ್ ಅವರ ಆಸ್ತಿಯನ್ನು ಪ್ರಕಟಿಸಲಾಗಿದೆ.

