ನವದೆಹಲಿ: ಬಿಜೆಪಿ ನಾಯಕಿ ಹಾಗೂ ದಿವಂಗತ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ವಿಧಿವಶರಾಗಿರುವ ಮಾಹಿತಿ ಲಭ್ಯವಾಗಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ವಿಷಯವನ್ನು ತಿಳಿಸಿದ್ದು, ಅವರ ಅಂತ್ಯಕ್ರಿಯೆಯನ್ನು ಇಂದು ಡಿಸೆಂಬರ್ 4, 2025 ರಂದು ಲೋಧಿ ರಸ್ತೆಯ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದೆ.
ದೇಶದ ಅತ್ಯಂತ ಗೌರವಾನ್ವಿತ ಹಿರಿಯ ವಕೀಲರಲ್ಲಿ ಒಬ್ಬರಾಗಿದ್ದ ಸ್ವರಾಜ್ ಕೌಶಲ್, ಮಿಜೋರಾಂನ ಮಾಜಿ ರಾಜ್ಯಪಾಲರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಸರಳತೆ ಮತ್ತು ತೀಕ್ಷ್ಣ ಚಿಂತನೆಯ ಆಡಳಿತಗಾರರಾಗಿ ಅವರು ಪ್ರಸಿದ್ಧರಾಗಿದ್ದರು.
ಇಂದು ಸಂಜೆ 4:30ಕ್ಕೆ ಲೋಧಿ ರಸ್ತೆ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸ್ವರಾಜ್ ಕೌಶಲ್ ಅವರ ಅಗಲಿಕೆಯನ್ನು ದೇಶದ ದೊಡ್ಡ ನಷ್ಟವೆಂದು ಪರಿಗಣಿಸಲಾಗಿದೆ.

