By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಸುತ್ತೂರು ಜಾತ್ರೆಯ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ಸುತ್ತೂರು ಜಾತ್ರೆಯ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ

ರಾಜ್ಯ-KarnatakaLatest

ಸುತ್ತೂರು ಜಾತ್ರೆಯ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ

Suttur Jatra Maha Dasoha inaugurated by Suttur Sri

Published January 15, 2026
Share
2 Min Read
Sutt Sutt Sutt
SHARE

ನಂಜನಗೂಡು: “ಹತ್ತೂರು ಸುತ್ತಿ ನೋಡು, ಸುತ್ತೂರು ಜಾತ್ರೆ ನೋಡು” ಎಂಬ ನಾಣ್ಣುಡಿಯಂತೆ ವಿಶ್ವವಿಖ್ಯಾತ ಸುತ್ತೂರು ಜಾತ್ರಾ ಮಹೋತ್ಸವದ ಕೇಂದ್ರಬಿಂದುವಾಗಿರುವ ಮಹಾ ದಾಸೋಹಕ್ಕೆ ಬುಧವಾರ ಮುಂಜಾನೆ ಸುತ್ತೂರು ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬೃಹತ್ ಒಲೆಗಳಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಹಳೆ ಮೈಸೂರು ಭಾಗದಲ್ಲಿ ದೀರ್ಘಕಾಲ ನಡೆಯುವ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆ 7 ಗಂಟೆಗೆ ಶಿವಯೋಗಿ ಶಿವರಾತ್ರಿಶ್ವರ ಕೇಂದ್ರ ಮಹಾಸ್ವಾಮಿಗಳ ಕತೃಗದ್ದಿಗೆಯಲ್ಲಿ ವಿವಿಧ ಪೂಜಾ ವಿಧಾನಗಳು ನೆರವೇರಿಸಲಾಯಿತು. ನಂತರ ಸುಮಾರು 7 ಗಂಟೆ ಸುಮಾರಿಗೆ 36 ಬೃಹತ್ ಒಲೆಗಳಿಗೆ ಸಾಧು–ಶರಣರು, ಗ್ರಾಮಸ್ಥರು ಹಾಗೂ ಗಣ್ಯರು ಕರ್ಪೂರದಿಂದ ಅಗ್ನಿ ಸ್ಪರ್ಶ ಮಾಡುವ ಮೂಲಕ ಮಹಾ ದಾಸೋಹಕ್ಕೆ ಚಾಲನೆ ನೀಡಿದರು.

ಆರು ದಿನಗಳ ಕಾಲ ನಡೆಯುವ ಮಹಾ ದಾಸೋಹದಲ್ಲಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ವೇಳೆ ನಿರಂತರವಾಗಿ ದಾಸೋಹ ನಡೆಯಲಿದೆ. ಈ ದಾಸೋಹದಲ್ಲಿ 35 ಬೃಹತ್ ಕೊಪ್ಪರಿಕೆಗಳು, ಸುಮಾರು 500 ಬಾಣಸಿಗರು, 500ಕ್ಕೂ ಹೆಚ್ಚು ಸಹಾಯಕರು ಹಾಗೂ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಗ್ರಾಮಸ್ಥರು ಸೇವೆ ಸಲ್ಲಿಸಲಿದ್ದಾರೆ.

ಗದ್ದುಗೆ ಪಕ್ಕದ ವಿಶಾಲ ಮೈದಾನದಲ್ಲಿ ಮಹಿಳೆಯರು, ಪುರುಷರು, ಸ್ವಯಂಸೇವಕರು ಹಾಗೂ ಸಾಮಾನ್ಯ ಭಕ್ತರಿಗಾಗಿ ಬೃಹತ್ ಶಾಮಿಯಾನಗಳನ್ನು ಹಾಕಲಾಗಿದೆ. ಒಂದು ವೇಳೆ ಸುಮಾರು ಒಂದು ಲಕ್ಷ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನಸಾಂಬಾರ್, ಮಜ್ಜಿಗೆ, ಕಡ್ಲೆಹುಳಿ, ಮೈಸೂರು ಪಾಕ್, ಪಾಯಸ ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರಿಗೆ ಬಡಿಸಲಾಗುತ್ತದೆ.

ಮಹಾ ದಾಸೋಹಕ್ಕೆ 1000 ಕ್ವಿಂಟಲ್ ಅಕ್ಕಿ, 250 ಕ್ವಿಂಟಲ್ ತೊಗರಿ ಬೇಳೆ, 1600 ಕ್ಯಾನ್ ರಿಫೈಂಡ್ ಆಯಿಲ್, 14 ಟನ್ ಬೆಲ್ಲ, 1350 ಕೆ.ಜಿ ಖಾರದ ಪುಡಿ, 200 ಕ್ವಿಂಟಲ್ ಸಕ್ಕರೆ, 600 ಕೆ.ಜಿ ನಂದಿನಿ ತುಪ್ಪ, 1400 ಕೆ.ಜಿ ದ್ರಾಕ್ಷಿ–ಗೋಡಂಬಿ, 9000 ಲೀಟರ್ ಹಾಲು, 28,000 ಲೀಟರ್ ಮೊಸರು, 5000 ಕೆ.ಜಿ ಉಪ್ಪಿನ ಕಾಯಿ, ತರಕಾರಿಗಳು, 25,000 ತೆಂಗಿನಕಾಯಿ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಬಳಸಲಾಗುತ್ತಿದೆ.

ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 2 ಎಎಸ್‌ಪಿ, 4 ಡಿವೈಎಸ್‌ಪಿ, 12 ಪೊಲೀಸ್ ಇನ್ಸ್ಪೆಕ್ಟರ್‌ಗಳು, 35 ಪಿಎಸ್‌ಐಗಳು ಸೇರಿದಂತೆ ಸ್ವಯಂಸೇವಕರು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಇಮ್ಮಡಿ ಮುರಗಿ ಸ್ವಾಮಿಗಳು, ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ನಂಜನಗೂಡು ಮಲ್ಲಿನಾಥ ಸ್ವಾಮಿಗಳು, ಕುರುಬೂರು ಮಲ್ಲಿಕಾರ್ಜುನ ಸ್ವಾಮಿಗಳು, ಮಾದಾಪುರ ಚನ್ನಬಸವ ಸ್ವಾಮಿಗಳು, ಚುಂಚನಹಳ್ಳಿ ಷಡಕ್ಷರಿ ಸ್ವಾಮಿಗಳು, ಗವಿಮಠ ಪ್ರಭುಲಿಂಗ ಸ್ವಾಮಿಗಳು, ರಾಗಿಬೊಮ್ಮನಹಳ್ಳಿ ಮಠದ ಬಸವಲಿಂಗ ದೇಸಿ ಕೇಂದ್ರ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು, ಎಸ್‌ಪಿ ಉದಯ್ ಶಂಕರ್, ಎಸ್‌ಪಿ ಮಂಜುನಾಥ, ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

You Might Also Like

ಜಮ್ಮು ಕಾಶ್ಮೀರದ ಕಥುವಾದಲ್ಲಿ ಉಗ್ರರರ ದಾಳಿ- ಇಬ್ಬರು ಉಗ್ರರ ಎನ್‌ಕೌಂಟರ್‌

30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ “ಜನರೊಂದಿಗೆ ಜನತಾದಳ” 2ನೇ ಹಂತದ ಪ್ರವಾಸ : ನಿಖಿಲ್ ಕುಮಾರಸ್ವಾಮಿ

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪದಲ್ಲಿ ಸಿ.ಟಿ.ರವಿ ಅರೆಸ್ಟ್

Kerala : ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸುವಾಗ ಅಗ್ನಿಶಾಮಕ ಸಿಬ್ಬಂದಿ ಸೇರಿ ಮೂವರು ಸಾವು

TAGGED:Suttur Jatre
Share This Article
Facebook Copy Link Print
Previous Article Indian And China Trade Indian And China Trade Indian And China Trade ಚೀನಾದೊಂದಿಗೆ ಭಾರತದ ವ್ಯಾಪಾರದಲ್ಲಿ ಹೆಚ್ಚಳ, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ವ್ಯಾಪಾರ
Next Article Siddaramaiah Siddaramaiah Siddaramaiah ಜಿ ರಾಮ್‌ಜಿ ವಿರುದ್ಧ ಸಮರ ಸಾರಿದ ಸಿಎಂ ಸಿದ್ದರಾಮಯ್ಯ, ಜ. 22ರಂದು ಜಂಟಿ ಅಧಿವೇಶನ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up