ಗೋಕಾಕ/ಚಿಕ್ಕೋಡಿ, ಡಿಸೆಂಬರ್ 24:ಹುದಲಿಯಿಂದ ಹುಣಶ್ಯಾಳ ಶುಗರ್ ಕಾರ್ಖಾನೆಗೆ ಮೊಲಾಸಿಸ್ ಸಾಗಿಸುತ್ತಿದ್ದ ಟ್ಯಾಂಕರ್ ನಿನ್ನೆ ತಡರಾತ್ರಿ ಅಪಘಾತಕ್ಕೀಡಾಗಿ ಪಲ್ಟಿಯಾದ ಪರಿಣಾಮ ಲಾರಿಯ ಕ್ಲೀನರ್ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ನಂದಿಕುರುಳಿ ಗ್ರಾಮದ ಸುರೇಶ ಮಾನೆ (ವಯಸ್ಸು …) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಟ್ಯಾಂಕರ್ ಪಲ್ಟಿಯಾದಾಗ ಲಾರಿಯ ಬಾಗಿಲು ತೆಗೆಯಲು ಸಾಧ್ಯವಾಗದೆ ಕ್ಲೀನರ್ ಲಾರಿಯ ಒಳಗೇ ಸಿಲುಕಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ರಕ್ಷಣಾ ಕಾರ್ಯ ನಡೆಯದೆ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ನಂತರ ಟ್ಯಾಂಕರ್ ಅನ್ನು ಮೇಲಕ್ಕೆತ್ತಲು ಲಾರಿ ಮಾಲಿಕನಿಂದ ನಿರ್ಲಕ್ಷ ವಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗೋಕಾಕ ಗ್ರಾಮೀಣ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ವರದಿ: ಕಲ್ಲಪ್ಪಾ ಮಾಳಾಜ
ಸಂಪೂರ್ಣ ನ್ಯೂಸ್, ಚಿಕ್ಕೋಡಿ

