ಸ್ಯಾಂಡಲ್ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮದುವೆ ಸಂಭ್ರಮದ ಜೋರಾಗಿದೆ. ಅರಿಶಿನ ಶಾಸ್ತ್ರ ಕೂಡ ಅದ್ಧೂರಿಯಾಗಿ ನಡೆದಿದೆ. ಆಗಸ್ಟ್ 10ರಂದು ಬೆಂಗಳೂರಲ್ಲಿ ಆರತಕ್ಷತೆ ಜರುಗಲಿದೆ. ಆಗಸ್ಟ್ 11ರಂದು ಇವರ ವಿವಾಹ ನೆರವೇರುತ್ತಿದೆ. ಇದಕ್ಕೂ ಮೊದಲು ಈ ಜೋಡಿ ಅರಿಶಿಣದ ನೀರಿನಲ್ಲಿ ಮಿಂದೆದ್ದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
ವಿಶೇಷವಾಗಿ ನಟ, ನೆನಪಿರಲಿ ಪ್ರೇಮ್ ಹಾಗೂ ಶರಣ್ ಸೇರಿದಂತೆ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಧರ್ಮ ಬೇರೆ ಬೇರೆಯಾಗಿದ್ರೂ ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆಯಾಗುತ್ತಿರುವ ಜೋಡಿ ನಾಳೆ ಬಾಳ ಬಂಧನಕ್ಕೆ ಒಳಗಾಗಲಿದ್ದಾರೆ.
ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಲಿರುವ ತರುಣ್ ಮತ್ತು ಸೋನಲ್ ಜೋಡಿ ತಮ್ಮ ಸುಂದರ ಪೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.












