ವಿಜಯಪುರ: ಮಾಜಿ ಸೈನಿಕ (Solider) ಹೋಗುತ್ತಿದ್ದ ಕಾರು (Car) ಭಯಾನಕವಾಗಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಸೈನಿಕ ಹಾಗೂ ಓರ್ವ ಮಹಿಳೆ ಮತ್ತು 2 ಮಕ್ಕಳು ಗಂಭೀರವಾಗಿರುವ ಘಟನೆ ಜೆಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮ ಬಳಿ ನಡೆದಿದೆ.
ಜಿಲ್ಲೆಯ ಮಸಬನಾಳ ಗ್ರಾಮದ ಮಾಜಿ ದೊಡ್ಡಯ್ಯ ಪುರಾಣಿಮಠ (37) ಹಾಗೂ ಇವರ ಅತ್ತೆ ಪುಷ್ಪಾವತಿ (55) ಮೃತ ದುರ್ದೈವಿಗಳು. ಕಳೆದ ನಾಲ್ಕು ದಿನಗಳ ಹಿಂದೆಷ್ಟೇ ಸೇನಿಯಿಂದ ನಿವೃತ್ತಿ ಹೊಂದಿ ಮನೆಗೆ ಬಂದಿದ್ದರು. ಆದರೆ ಕೆಲಸದ ನಿಮಿತ್ತ ಢವಳಾಗಿ ಗ್ರಾಮದಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಕಾರು ರಸ್ತೆಯಲ್ಲಿ ಪಲ್ಟಿಯಾಗಿದೆ. ಇದನ್ನೂ ಓದಿ: ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ – ಆಟೋಗೆ ಡಿಕ್ಕಿ ಹೊಡೆದ ಕಾರು
ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನ ಪತ್ನಿ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಲ್ಟಿಯಾದ ರಭಸಕ್ಕೆ ಕಾರು ಎಲ್ಲ ನಜ್ಜುಗುಜ್ಜಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 14 ಬಾರಿ ನೇಹಾಳನ್ನು ಇರಿದು ಕೊಂದ ಫ6ಯಾಜ್- ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ