ಧಾರವಾಡ: ರಾತ್ರಿ ಕುಡಿದು ಬಂದು ಜಗಳ ಮಾಡಿ ಬೆಳಗ್ಗೆ ಹೆಂಡತಿಯನ್ನೆ (Wife) ಕೊಡಲಿಯಿಂದ ಕೊಚ್ಚಿ ಕೊಲೆಮಾಡಿರುವ (Killed) ಘಟನೆ ನಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ನಡೆದಿದೆ.
ಮಲ್ಲವ್ವ ಬಳ್ಳೂರ ಮೃತ ದುರ್ದೈವಿ. ಆರೋಪಿ ಶಿವಪ್ಪ ಬಳ್ಳೂರ ಮತ್ತು ಮಲ್ಲವ್ವ ಮದುವೆಯಾಗಿ 15 ವರ್ಷಗಳಾಗಿವೆ. ಆದರೆ ಶಿವಪ್ಪ ನಿತ್ಯ ಪತ್ನಿ ಮೇಲೆ ಸಂಶಯ ಪಟ್ಟು ಜಗಳ ಮಾಡುತಿದ್ದ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರೂ. ಪರಿಹಾರ ಘೋಷಣೆ
ನಿನ್ನೆ ರಾತ್ರಿ ಕುಡಿದು ಮನೆಗೆ ಬಂದಿದ್ದು, ರಾತ್ರಿಯಿಡೀ ಜಗಳ ಮಡಿ ಬೆಳಗ್ಗೆ ಹೆಂಡತಿಯನ್ನ ಕೊಂದು ಮನೆಯಲ್ಲಿಯೇ ಕೂತುಕೊಂಡಿದ್ದಾನೆ. ನಿತ್ಯ ಹೆಂಡತಿ ಮೇಲೆ ಶಿವಪ್ಪ ಸಂಶಯ ಪಡುತ್ತಿದ್ದ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮತದಾನದಿಂದ ದೂರ ಉಳಿದ ಬೆಂಗಳೂರಿಗರು- ವಿದ್ಯಾವಂತರೇ ತುಂಬಿರೋ ಮಯಾನಗರಿ
ಸದ್ಯ ನವಲಗುಂದ ಪೊಲೀಸರು ಆರೋಪಿ ಶಿವಪ್ಪನನ್ನು ವಶಕ್ಕೆ ಪಡೆದದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿರು ಬಿಸಿಲಿಗೆ ಸ್ಕಿನ್ ಮೇಲೆ ಬಾರಿ ಎಫೆಕ್ಟ್…….! 200 ರ ಗಡಿ ದಾಟ್ಟಿದ ಹೀಟ್ ರ್ಯಾಶ್ ಕಾಯಿಲೆ

