ಗದಗ: ಕೆಲ ದಿನಗಳ ಹಿಂದೆಯಷ್ಟೆ ದಾಸರ ಓಣಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸರ ವಿಚಾರಣೆ ವೇಳೆ ಮನೆಯ ಮಗನೇ ಇಡೀ ಕುಟುಂಬವನ್ನು ಬರ್ಬವಾಗಿ ಕೊಲೆ ಮಾಡಿಸಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್‌ನ ಮದುವೆ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಗದಗಕ್ಕೆ ಬಂದಿದ್ದರು. ಪತಿ, ಪತ್ನಿ, ಮಗಳು ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದರು. ಇದೇ ವೇಳೆ ಏಕಾಏಕಿ ಹಿಂದಿರುವ ಕಿಟಿಕಿಯಿಂದ ಬಂದ ಹಂತಕರು ಕೊಲೆ ಮಾಡಿದ್ದಾರೆ. ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿದ ಹಂತಕರು ಅಲ್ಲಿಂದ ಕಾಲ್ಕತ್ತಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ದಲಿತ ಯುವಕನ ಹತ್ಯೆ
ಘಟನೆಯಲ್ಲಿ ಉಪಾಧ್ಯಕ್ಷೆ ಸುನಾಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ್ (55), ಪತ್ನಿ ಲಕ್ಷಿö್ಮ (45) ,ಪುತ್ರಿ ಆಕಾಂಕ್ಷ (16) ಮೃತ ದುರ್ದೈವಿಗಳು. ಬಳಿಕ ಅವರ ಮನೆ ಹಿಂಬದಿಯ ಚರಂಡಿಯಲ್ಲಿ ಮಾರಕಾಸ್ತçಗಳು ಪತೆಯಾಗಿವೆ. ಇದರ ಜೊತೆಗೆ ಚಿನ್ನದ ಬಳೆಗಳು ಎರಡು ಜತೆ ಶೂಗಳು ಪತ್ತೆಯಾಗಿವೆ. ಇದನ್ನೂ ಓದಿ: 2016 ರ ಶಿಕ್ಷಕರ ಹಗರಣಕ್ಕೆ ಬಿಗ್ ಟ್ವಿಸ್ಟ್ -ಕೆಲಸ ಕಳೆದುಕೊಂಡ 25,000 ಶಿಕ್ಷಕರು
ಈ ಕೊಲೆಗೆ ಅಸಲಿ ಕಾರಣ ಏನು..?ಪ್ರಕಾಶ್ ಬಾಕಳೆ ಹಿರಿಯ ಮಗ ವಿನಾಯಕ್ ಬಾಕಳೆಯೇ ಈ ಕೊಲೆಗೆ ಸುಪಾರಿ ನೀಡಿರುವುದು ತನಿಖೆ ಮೂಲಕ ತಿಳಿದು ಬಂದಿದೆ. ಹೌದು, ಬಾಕಳೆ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲು ಖುದ್ದು ಹಿರಿಯ ಮಗ ವಿನಾಯಕ್ ಬಾಕಳೆ 65 ಲಕ್ಷ ರೂಪಾಯಿ ಡೀಲ್ ಮಾಡಿದ್ದನಂತೆ. ಅಲ್ಲದೇ, ಮಹಾರಾಷ್ಟ್ರ ಮೂಲದ ಫಯಾಜ್ ಗ್ಯಾಂಗ್ಗೆ ಮುಂಗಡವಾಗಿ 2 ಲಕ್ಷ ರೂಪಾಯಿ ನೀಡಿದ್ದನಂತೆ. ಈ ಕೊಲೆಗೆ ಆಸ್ತಿ ಹಂಚಿಕೆ ವಿಷಯ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು, ಈ ಕೊಲೆ ಕೇಸ್ ಬಗ್ಗೆ ತನಿಖೆ ನಡೆಸಿದ್ದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಕೊಲೆ ಪ್ರಕರಣ ಬೇದಿಸಿದ್ದಕ್ಕೆ ಡಿಜಿ, ಐಜಿಪಿ ವಿಕಾಸ್ ಕುಮಾರ್ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಅಖಾಡದಿಂದ ದಿಂಗಾಲೇಶ್ವರ ಶ್ರೀ ಹಿಂದಕ್ಕೆ

