ಬೆಂಗಳೂರು: ಹಬ್ಬಗಳ ತಿಂಗಳು ಎಂದೇ ಖ್ಯಾತವಾಗಿರುವ ಶ್ರಾವಣ ಮಾಸ ಆರಂಭಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಹೂವಿನ ದರ ಏರಿಕೆ ಕಾಣುತ್ತಿದೆ. ಈ ಬಾರಿ ಶ್ರಾವಣದಲ್ಲಿ ಭಕ್ತರಿಗೆ ಹೂವಿನ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಟ್ಟಲಿದೆ.
ಹೂವು ಬೆಳೆಯುವ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಹೂವು ಬರುವುದು ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮಳೆಯಿಂದ ಹೂವು ಬೇಗ ಹಾಳಾಗುವುದರಿಂದ ಖರೀದಿ ಮಾಡಿದ ದಿನವೇ ಮಾರುವ ಒತ್ತಡವೂ ಇರುತ್ತದೆ. ಇಷ್ಟೆಲ್ಲ ಇದ್ದರೂ ಹೂವಿನ ದರ ಬೇಸಿಗೆಯಲ್ಲಿ ಬಿಸಿಲೇರಿದಂತೆ ಏರಿಕೆ ಕಾಣುತ್ತಿದೆ.
ಹೂ ಗಳ ಬೆಲೆ ಒನ್ ಟೂ ಡಬಲ್ ಆಗಿದೆ. ಶ್ರಾವಣ ಮಾಸ ಪ್ರಾರಂಭದಲ್ಲೇ ಇಷ್ಟು ಏರಿಕೆಯಾದರೆ ಮುಂದೇನು ಮಾಡುವುದು ಎನ್ನುತ್ತಿದ್ದಾರೆ ಗ್ರಾಹಕರು. ಇನ್ನು ಹೂಗಳ ಬೆಲೆ ನೋಡೋದಾದರೆ ಗುಲಾಬಿ 100 -250ರೂ, ಸೇವಂತಿಗೆ 400ರೂ, ಸುಗಂಧ ರಾಜ 80-150ರೂ, ಕಾಕಡ 500- 1000ರೂ, ಮಲ್ಲಿಗೆ 650ರೂ ಹಾಗೂ ಕನಕಾಂಬರ 600- 1500ರೂ ಆಗಿದೆ.
ಆಷಾಢ ಮಾಸದ ಕೊನೆಯ ಮೂರ್ನಾಲ್ಕು ದಿನಗಳಿಂದ ಹೂವಿನ ದರ ಏರಿಕೆ ಕಾಣುತ್ತಿದೆ. ಇನ್ನು ಬಹುಬೇಡಿಕೆಯ ಶ್ರಾವಣ ಮಾಸದಲ್ಲಿ ಹೂವಿನ ಬೆಲೆ ಎಷ್ಟು ಏರಿಕೆಯಾಗಬಹುದು? ಎಂಬ ಆತಂಕ ಈಗಾಗಲೇ ಗ್ರಾಹಕರಲ್ಲಿಎದುರಾಗಿದೆ. ಈ ಬಾರಿ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಹೂವಿನ ನಾಟಿ ಕಡಿಮೆಯಾಗಿದೆ.
ಹೂಗಳ ಬೆಲೆ ನೋಡೋದಾದ್ರೆ
ಗುಲಾಬಿ- 100 – 250
ಸೇವಂತಿಗೆ- 400
ಸುಗಂಧ ರಾಜ 80-150,
ಕಾಕಡ 500- 1000
ಮಲ್ಲಿಗೆ 650
ಕನಕಾಂಬರ 600- 1500