ಮಂಡ್ಯ: ಮಂಡ್ಯದ ಮಳವಳ್ಳಿ ತಾಲೂಕಿನ ಬ್ಲಫ್ ಪ್ರದೇಶದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಘಟನೆ ಇದೀಗ ದೊಡ್ಡ ಮಾನವ–ವನ್ಯಜೀವಿ ರಕ್ಷಣಾ ಪ್ರಶ್ನೆಯಾಗಿ ತಲೆದೋರಿದೆ. ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಸಂಬಂಧಿಸಿದ ಆಳವಾದ ಕೆನಾಲ್‌ಗೆ ಕಾಡಾನೆ ಬಿದ್ದು ದಿನಗಳೇ ಕಳೆದರೂ, ಅರಣ್ಯ ಇಲಾಖೆ ಮತ್ತು ಕೇಂದ್ರದ ಸಿಬ್ಬಂದಿ ಯಾವುದೇ ತುರ್ತು ಕ್ರಮ ಕೈಗೊಳ್ಳದಿರುವುದು ಕಟ್ಟುನಿಟ್ಟಿನ ಟೀಕೆಗೆ ಗುರಿಯಾಗಿದೆ.
ಶನಿವಾರ ರಾತ್ರಿ ಆನೆ ಕೆನಾಲ್‌ಗೆ ಬಿದ್ದಿದೆ. ಘಟನೆಯನ್ನು ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿಗೇ ಮೊದಲಿಗೆ ತಿಳಿಸಿದರೂ ಸೈಲೆಂಟ್ ಆಗಿದ್ದಾರೆ. ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಮೂರು ದಿನ ಕಳೆದರೂ ರಕ್ಷಣಾ ಕಾರ್ಯ ಆರಂಭವಾಗಿಲ್ಲ. ಆಹಾರ–ನೀರು ಸಿಗದೇ ಆನೆ ಕೆನಾಲ್ ಒಳಗೇ ಆತಂಕದಲ್ಲಿ ಅಲೆದಾಡುತ್ತಿದೆ. ಆನೆಗೆ ದೌರ್ಬಲ್ಯ, ಗಾಯದ ಅಪಾಯ ಹೆಚ್ಚಾಗಿದೆ.

