ಚಿಕ್ಕಬಳ್ಳಾಪುರ: ಹಾಸನದಲ್ಲಿ ಪೆನ್‌ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ SIT ತನಿಖೆ ಚುರುಕಾಗಿದೆ. ವಿದೇಶದಲ್ಲಿರುವ ಆರೋಪಿ ಪ್ರಜ್ವಲ್ ರೇವಣ್ಣ(Prajwal Revanna) ಅವರು ಶೀಘ್ರವೇ ಭಾರತಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ. ಈ ಸುಳಿವಿನ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) SIT ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ಬೆಂಗಳೂರು ಏರ್‌ಪೋರ್ಟ್ಗೆ ಆಗಮಿಸುವ ಪ್ರತಿಯೊಂದು ವಿಮಾನ ಹಾಗೂ ಪ್ಯಾಸೆಂಜರ್ ಲಿಸ್ಟ್ ಅನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಇಂದು ಪೊಲೀಸರು ಹಾಗೂ ಎಸ್‌ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ಕೆಐಎಬಿಗೆ ಬರ್ತಿರುವ ವಿಮಾನಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ:ಪಾಕಿಸ್ತಾನದ ಬಂದರಿನಲ್ಲಿ ಉಗ್ರ ದಾಳಿ, ಮಲಗಿದ್ದ ಕಾರ್ಮಿಕರ ಗುಂಡಿಕ್ಕಿ ಹತ್ಯೆ
ಇಂದು ಮಧ್ಯಾಹ್ನದವರೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಿಂಗಾಪುರ, ದುಬೈ, ದೋಹಾ ಸೇರಿದಂತೆ ಹಲವು ದೇಶಗಳಿಂದ ವಿಮಾನಗಳು ಆಗಮಿಸಿವೆ. ಬೆಳಗ್ಗೆಯಿಂದ 10ಕ್ಕೂ ಹೆಚ್ಚು ವಿಮಾನಗಳ ಲಿಸ್ಟ್ ಪರಿಶೀಲನೆ ಮಾಡಿದ್ದಾರೆ. ಸಂಜೆಯಿಂದ ಮಧ್ಯರಾತ್ರಿವರೆಗೂ ಬೆಂಗಳೂರಿಗೆ ಬರಲಿರುವ 30ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಮಾನಗಳು ಆಗಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭೀಕರ ಬರಗಾಲಕ್ಕೆ ಒಣಗಿದ 400 ಎಕರೆ ಕೆರೆ, ಸಾವಿರಾರು ಮೀನುಗಳ ಮಾರಣಹೋಮ
ಮೇ 15ಕ್ಕೆ ಬೆಂಗಳೂರಿಗೆ ವಾಪಸ್?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ 15ಕ್ಕೆ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಜ್ವಲ್ ಆಗಮಿಸಲಿದ್ದಾರೆ ಎನ್ನಲಾಗಿದೆ. ಮೇ 15ರ ಮಧ್ಯರಾತ್ರಿ 12:30ಕ್ಕೆ ಜರ್ಮನಿಯಿಂದ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಇದನ್ನೂ ಓದಿ: ಏರ್ ಇಂಡಿಯಾದ 300 ಉದ್ಯೋಗಿಗಳ ಮೊಬೈಲ್ ಸ್ವಿಚ್ ಆಫ್; ಗಗನಸಖಿಯರು ಸೇರಿ 30 ಮಂದಿ ಲೇ ಆಫ್
ಪೆನ್‌ಡ್ರೈವ್ ಪ್ರಕರಣದ ನಂತರ ಪ್ರಜ್ವಲ್ ರೇವಣ್ಣ ಅವರು ಎರಡು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಇದೀಗ ಮತ್ತೆ ಟಿಕೆಟ್ ಬುಕ್ ಆದ ಹಿನ್ನೆಲೆಯಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಎಸ್.ಐ.ಟಿಗೆ ಸುಳಿವು ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ವಿಮಾನ ನಿಲ್ದಾಣಕ್ಕೆ ಬರ್ತಿದ್ದಂತೆ ಎಸ್.ಐ.ಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಸೇರಿ 3 ಭಯೋತ್ಪಾದಕರ ಹತ್ಯೆ