1.ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲು ರನ್ಯಾ ರಾವ್ ಪತಿ ಜತಿನ್ ಸಿದ್ಧತೆ
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲುಪಾಲಾಗಿರುವ ನಟಿ ರನ್ಯಾಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಪತಿ ಜತಿನ್ ಹುಕ್ಕೇರಿ ರನ್ಯಾಳಿಂದ ವಿಚ್ಛೇದನ ಪಡೆಯಲು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಮದುವೆ ಬಳಿಕ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿರುವ ಜತಿನ್, ರನ್ಯಾಳಿಂದ ಅಂತರ ಕಾಯ್ದುಕೊಂಡಿದ್ದಾರೆ.
2.ಹಿರಿಯ ಕಲಾವಿದೆಯ ಜೀವನಕ್ಕೆ ಬೆಳಕಾದ ದರ್ಶನ್
ಹಿರಿಯ ಕನ್ನಡ ನಟಿ ಶೈಲಶ್ರೀ ಅವರಿಗೆ ದರ್ಶನ್ ಸಹಾಯ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ. ಶೈಲಶ್ರೀ ಅವರು ವಸತಿ ಸಮಸ್ಯೆಯನ್ನು ಎದುರಿಸುತ್ತಿದ್ದಾಗ ದರ್ಶನ್ ಅವರು ಸಹಾಯ ಒದಗಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
3.ನಿತ್ಯಾನಂದ ಸತ್ತಿಲ್ಲ, ಕೈಲಾಸದಿಂದ ಬಂತು ಸ್ಪಷ್ಟನೆ
ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಸತ್ತಿಲ್ಲ ಎಂದು ಕೈಲಾಸದ ಜನರು ಸ್ಪಷ್ಟನೆ ನೀಡಿದ್ದಾರೆ. ನಿತ್ಯಾನಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆಂಬ ಸುದ್ದಿ ಹರಿದಾಡಿತ್ತು. ಅದಾದ ಬಳಿಕ ಏಪ್ರಿಲ್ 1 ರಂದು ನಿತ್ಯಾನಂದ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿಯೂ ಕೇಳಿಬಂದಿತ್ತು. ಆದರೆ ಕೈಲಾಸದ ಜನರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿತ್ಯಾನಂದ ಸಾವನ್ನಪ್ಪಿಲ್ಲ ಎಂದಿದ್ದಾರೆ
4.ಗಲ್ಲಿ ಕಿಚನ್‌ಗೆ ಭಾವುಕ ವಿದಾಯ ಹೇಳಿದ ಶೈನ್ ಶೆಟ್ಟಿ
ನಟ ಮತ್ತು ʻಬಿಗ್ ಬಾಸ್ ಕನ್ನಡ ಸೀಸನ್ 7ರʼ ವಿನ್ನರ್ ಕೂಡ ಆಗಿದ್ದ ಶೈನ್ ಶೆಟ್ಟಿ, ಸಿನಿಮಾಗಳ ಜೊತೆ ಜೊತೆಗೆ ಕೆಲ ಬ್ಯುಸಿನೆಸ್‌ಗಳನ್ನು ನಡೆಸುತ್ತಿದ್ದಾರೆ. ಈ ಪೈಕಿ ತಮ್ಮ ʻಗಲ್ಲಿ ಕಿಚನ್ʼ ರೆಸ್ಟೋರೆಂಟ್ ಕೂಡ ಒಂದು. ಚಿಕ್ಕದಾಗಿ ಶುರು ಮಾಡಿದ್ದ ಗಲ್ಲಿ ಕಿಚನ್ ಸದ್ಯ ಎರಡು ದೊಡ್ಡ ಬ್ರ್ಯಾಂಚ್‌ಗಳಾಗಿ ಬೆಳೆದಿದೆ. ಆದರೂ ಗಲ್ಲಿ ಕಿಚನ್‌ಗೆ ಶೈನ್ ಶೆಟ್ಟಿ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶೈನ್ ಶೆಟ್ಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
5.ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ಪೆಕ್ಟರ್ಗೆ ಲೋಕಾ ಶಾಕ್
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲೋಕಾಯುಕ್ತ ದಾಳಿಯಿಂದ ಪರಾರಿಯಾಗಿದ್ದಾರೆ. 4 ಕೋಟಿ ರೂ. ಮೌಲ್ಯದ ಮನೆ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ದಾಳಿ ನಡೆಸಿದಾಗ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಕಾನ್ಸ್ಟೇಬಲ್‌ಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ.
6.ಕಾಂಗ್ರೆಸ್ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಬೆಲೆ ಏರಿಕೆಗೆ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಜನರ ಆಕ್ರೋಶವನ್ನೇ ತಮ್ಮ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಹೋರಾಟದ ಕಹಳೆ ಮೊಳಗಿಸಿದೆ. ಹಾಲು, ಮೊಸರು, ವಿದ್ಯುತ್, ಟೋಲ್ ದರ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಳ ಮಾಡಲಾಗಿದ್ದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಆರೋಪ ಪಟ್ಟಿ ಬಿಡುಗಡೆ ಮಾಡಿದೆ.
7.ಬಹಳ ದಿನಗಳ ನಂತರ ಸುನಿತಾ ವಿಲಿಯಮ್ಸ್ ಅವರನ್ನು ಗುರುತು ಹಿಡಿದ ಶ್ವಾನಗಳು
ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬಂದ 15 ದಿನದ ಬಳಿಕ ಮತ್ತೊಂದು ಖುಷಿಯ ವಿಡಿಯೋ ಬಿಡುಗಡೆಯಾಗಿದೆ.9 ತಿಂಗಳಾದ ಮೇಲೆ ಭೂಮಿಗೆ ಬಂದಿರುವ ಸುನಿತಾ ವಿಲಿಯಮ್ಸ್ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ತಮ್ಮ ಮನೆಗೂ ಮರಳಿರುವ ಸುನಿತಾ ವಿಲಿಯಮ್ಸ್, ಮೊದಲ ಬಾರಿಗೆ ತಮ್ಮ ಮುದ್ದಿನ 2 ನಾಯಿಗಳನ್ನು ಭೇಟಿಯಾಗಿದ್ದಾರೆ.
8.ಕೋರ್ಟ್ ಮೆಟ್ಟಿಲೇರಿದ ಇಡಿ, ಸಿದ್ದರಾಮಯ್ಯಗೆ ಢವ ಢವ
ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ನಡೆಸಿದೆ. ಲೋಕಾಯುಕ್ತ ವಿಚಾರಣಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಜಾರಾಗಿದ್ದರು. ಇದೀಗ, ಮತ್ತೆ ಮುಡಾ ಹಗರಣ ಮುನ್ನಲೆಗೆ ಬಂದಿದೆ.
9.ದರ್ಶನ್ ಜಾಮೀನು ರದ್ದು ಕೋರಿ ಅರ್ಜಿ: ಏಪ್ರಿಲ್ 22ಕ್ಕೆ ವಿಚಾರಣೆ
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಲವು ಆರೋಪಿಗಳಿಗೆ ಹೈಕೋರ್ಟ್ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ಆದರೆ ರಾಜ್ಯ ಸರ್ಕಾರವು ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂನಲ್ಲಿ ಏಪ್ರಿಲ್ 22ಕ್ಕೆ ವಿಚಾರಣೆ ನಡೆಯಲಿದೆ. ದರ್ಶನ್ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿ ರದ್ದಾಗಲಿದೆಯೇ ಕಾದು ನೋಡಬೇಕಿದೆ.
10.ಶಾಸಕ ರಾಜು ಕಾಗೆ ಸಹೋದರನ ಪುತ್ರನಿದ್ದ ಕಾರು ಅಪಘಾತ
ಬೆಳಗಾವಿ ಜಿಲ್ಲೆಯ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಶಾಸಕ ರಾಜು ಕಾಗೆ ಅವರ ಸಹೋದರನ ಮಗ ಚಾಲನೆ ಮಾಡುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಇಬ್ಬರಿಗೆ ಗಂಭೀರ ಗಾಯಗಳಾಗಿದೆ.

