Top 10 News :
1.ಸಾಹಿತಿ ಬಾನು ಮುಷ್ತಾಕ್ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ
ಕನ್ನಡದ ಲೇಖಕಿ, ಕತೆಗಾರ್ತಿ, ವಕೀಲೆ, ಸಾಮಾಜಿಕ ಕಾರ್ಯಕರ್ತೆ ಬಾನು ಮುಷ್ತಾಕ್ ಅವರಿಗೆ 2025 ಸಾಲಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ.ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿರುವ ಮೊದಲ ಕನ್ನಡಿಗರೆಂಬ ಹೆಮ್ಮೆಗೂ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ
2.ದರ್ಪ ತೋರಿದ್ದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಟ್ರಾನ್ಸ್‌ಫರ್!
ಬೆಂಗಳೂರಿನ ಹೊರವಲಯ ಅನೆಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮ್ಯಾನೇಜರ್ ದುರ್ವತನೆಗೆ ಇದೀಗ ಬ್ಯಾಂಕ್ ಆಡಳಿತ ಮಂಡಳಿ ಶಿಕ್ಷೆ ನೀಡಿದೆ. ನಾನು ಕನ್ನಡ ಮಾತನಾಡೊಲ್ಲ, ನೀವೇ ಹಿಂದೆ ಮಾತನಾಡಿ ಇಲ್ಲದಿದ್ದರೆ ಅದೇನು ಮಾಡ್ಕೋತಿರೋ ಮಾಡಿಕೊಳ್ಳಿ ಎಂದು ಹಿಂದಿ ದರ್ಪವನ್ನು ಮೆರೆದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರನ್ನು ವರ್ಗಾವಣೆ ಮಾಡಲಾಗಿದೆ
3.ಗೃಹ ಸಚಿವ ಪರಮೇಶ್ವರ್’ಗೆ ED ಶಾಕ್, ದಾಖಲೆಗಳ ಪರಿಶೀಲನೆ
ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.ಹೆಗ್ಗೆರೆ ಬಳಿಯಿರುವ ಸಿದ್ದಾರ್ಥ್ ಮೆಡಿಕಲ್ ಕಾಲೇಜು, ತುಮಕೂರಿನ ಎಸ್ಎಸ್ಐಟಿ ಕಾಲೇಜು ಸೇರಿದಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದೆ.
4.ಪ್ರಸ್ತಾವಿತ ಅಬಕಾರಿ ಸುಂಕ ಹೆಚ್ಚಳಕ್ಕೆ ರಾಜ್ಯ ವೈನ್ ವ್ಯಾಪಾರಿಗಳ ವಿರೋಧ
ರಾಜ್ಯ ಸರ್ಕಾರವು ಅಬಕಾರಿ ಪರವಾನಗಿ ಶುಲ್ಕವನ್ನು ಹೆಚ್ಚಿಸುವ ಕರಡು ಪ್ರಸ್ತಾವನೆಯನ್ನು ಮಂಡಿಸಿರುವುದು, ವೈನ್ ವ್ಯಾಪಾರಿಗಳನ್ನು ಕೆರಳಿಸಿದೆ. ಶುಲ್ಕ ಹೆಚ್ಚಳವನ್ನು ವಿರೋಧಿಸುತ್ತಿರುವ ವೈನ್ ವ್ಯಾಪಾರಿಗಳ ಸಂಘಗಳ ಒಕ್ಕೂಟವು ಗುರುವಾರ ಎಲ್ಲಾ ಜಿಲ್ಲಾ ಸದಸ್ಯರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸಿದೆ.
5.ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಜೀವರಕ್ಷಕ ಔಷಧ – ಸಿಬ್ಬಂದಿ ಕೊರತೆ
ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕಂಡುಬಂದ ಹಲವಾರು ನ್ಯೂನತೆಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನೀಡಿದ ನೋಟಿಸ್‌ಗೆ ಉತ್ತರಿಸಲು ವಿಫಲರಾದ ಕಾರಣ ಲೋಕಾಯುಕ್ತರು ಸಮನ್ಸ್ ಜಾರಿ ಮಾಡಿದ್ದಾರೆ.
6.ಸಬ್ ಇನ್ಸ್ ಪೆಕ್ಟರ್ ಪತ್ನಿ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್
ಸಬ್-ಇನ್‌ಸ್ಪೆಕ್ಟರ್ ನಾಗರಾಜ್‌ರ ಪತ್ನಿ ಶಾಲಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಆಯಾಮಗಳು ಬೆಳಕಿಗೆ ಬಂದಿವೆ. ಶಾಲಿನಿಯ ವಿಚಿತ್ರ ಮತ್ತು ಆಕ್ರಮಣಕಾರಿ ವರ್ತನೆಯಿಂದ ಬೇಸತ್ತು, ನಾಗರಾಜ್ ಮನೆಯನ್ನು ತೊರೆದು ಪಿಜಿಯಲ್ಲಿ ವಾಸಿಸುತ್ತಿದ್ದರು. ಶಾಲಿನಿಯ ಆತ್ಮಹತ್ಯೆಯಿಂದ ಈ ಪ್ರಕರಣ ಗಮನ ಸೆಳೆದಿದ್ದು, ತನಿಖೆಯಿಂದ ಹಲವು ಆಘಾತಕಾರಿ ವಿಷಯಗಳು ಬಹಿರಂಗವಾಗಿವೆ
7.ನಟಿ ರನ್ಯಾ ರಾವ್ಗೆ ಜಾಮೀನು, ಬಿಡುಗಡೆ ಅನುಮಾನ
ಬೆಂಗಳೂರಿನ ವಿಶೇಷ ನ್ಯಾಯಾಲಯವು ನಟಿ ರನ್ಯಾ ರಾವ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅಕ್ರಮವಾಗಿ ಚಿನ್ನ ಸಾಗಣೆ ಮಾಡುವ ಸಮಯದಲ್ಲಿ ನಟಿ ರನ್ಯಾ ರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾರ್ಚ್ 3 ರಂದು ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು. 14.80 ಕೆಜಿ ಚಿನ್ನದೊಟ್ಟಿಗೆ ನಟಿ ಸಿಕ್ಕಿ ಬಿದ್ದಿದ್ದರು. ಜಾಮೀನು ದೊರೆತಿದ್ದರೂ ಸಹ ನಟಿಯ ಬಿಡುಗಡೆ ಅನುಮಾನವಾಗಿದೆ.
8.PL 2025: ವೈಭವೋಪೇತ ದಾಖಲೆ ಬರೆದ ವೈಭವ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 14 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಈ ಬಾರಿಯ ಐಪಿಎಲ್ನಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದ ವೈಭವ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
9.ಬಿಜಾಪುರ್ ಗಡಿಯಲ್ಲಿ ಗುಂಡಿನ ಚಕಮಕಿ: 26 ನಕ್ಸಲೀಯರು ಹತ್ಯೆ
ಛತ್ತೀಸ್‌ಗಢದ ನಾರಾಯಣ್ ಪುರ-ಬಿಜಾಪುರ್ ಗಡಿಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಕನಿಷ್ಠ 26 ನಕ್ಸಲರು ಮೃತಪಟ್ಟಿದ್ದಾರೆ.ಗುಂಡಿನ ಚಕಮಕಿಯಲ್ಲಿ ಪೊಲೀಸರ ಬೆಂಬಲಿಗ ಮೃತಪಟ್ಟಿದ್ದಾರೆ ಮತ್ತು ಒಬ್ಬರು ಪೊಲೀಸರಿಗೆ ಗಾಯವಾಗಿದೆ ಎಂದು ಪೊಲೀಸರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
10.ಆಂಧ್ರ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದ ಸಿಎಂ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಿದರು. ಆಂಧ್ರಪ್ರದೇಶದ ಅರಣ್ಯ ಸಚಿವರಾದ ಪವನ್ ಕಲ್ಯಾಣ್ ಅವರು ಆಂಧ್ರ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.
- ಹತ್ಯೆ ಪ್ರಕರಣ ; ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
- ಲಿಬಿಯಾದಲ್ಲಿ ಗಡಾಫಿ ಪುತ್ರ ಸೈಫ್ ಅಲ್–ಇಸ್ಲಾಂಗೆ ಗುಂಡಿಕ್ಕಿ ಹತ್ಯೆ, ಮತ್ತೆ ಭುಗಿಲೆದ್ದ ರಾಜಕೀಯ ಉದ್ವಿಗ್ನತೆ
- ಮತ್ತಷ್ಟು ದುಬಾರಿಯಾದ ಚಿನ್ನ-ಬೆಳ್ಳಿ, ಇಂದು ಮತ್ತೆ ಬೆಲೆ ಏರಿಕೆ
- ಆನ್‌ಲೈನ್ ಗೇಮಿಂಗ್‌ಗೆ ಬಲಿಯಾದ ಮೂವರು ಅಪ್ರಾಪ್ತ ಸಹೋದರಿಯರು
- ಮನರೇಗಾ ಮರುಸ್ಥಾಪಿಸುವ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಣಯ

