1.ಮದುವೆಯ ಆಸೆ ತೋರಿಸಿ ವಿಧವೆಯ ಜೊತೆ ಲವ್, ಲಕ್ಷಾಂತರ ರೂ. ವಂಚನೆ
ಆಕೆ ಹತ್ತು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡ ವಿಧವೆ. ಒಬ್ಬ ಮಗನನ್ನು ಓದಿಸುತ್ತಾ ಹೇಗೋ ಸಂಸಾರ ಮಾಡುತ್ತಿದ್ದಳು. ಸಂಕಷ್ಟದ ಸಮಯದಲ್ಲಿ ವಿಧವೆಗೆ ಪರಿಚಯವಾದ ವ್ಯಕ್ತಿಯೊಬ್ಬ ಪ್ರೀತಿ-ಪ್ರೇಮದ ಹೆಸರಿನಲ್ಲಿ ಮದುವೆಯಾಗುವುದಾಗಿ ಹೇಳಿದ್ದಾನೆ. ನಯವಂಚಕನ ಬಣ್ಣದ ಮಾತಿಗೆ ಮರುಳಾದ ಆ ವಿಧವೆ ಮೋಸ ಹೋಗಿದ್ದಾಳೆ. ಕಿರಾತಕ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿ ಆಕೆಯನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾನೆ. ಇದೀಗ ಆಕೆ ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮುಂದೆ ಧರಣಿ ಮಾಡುವಂತಾಗಿದೆ.
2.ಮಹೇಶ್ ಬಾಬುಗೆ ಜೆನ್-ಜಿ ಸ್ಲ್ಯಾಂಗ್ ಹೇಳಿಕೊಟ್ಟ ಸಿತಾರಾ
ಮಹೇಶ್ ಬಾಬು ಮತ್ತು ಅವರ ಮಗಳು ಸಿತಾರಾ ನಡುವಿನ ಜನರೇಶನ್ ಗ್ಯಾಪ್ ಅನ್ನು ಒಂದು ಮೋಜಿನ ಜಾಹೀರಾತಿನಲ್ಲಿ ತೋರಿಸಲಾಗಿದೆ. ಸಿತಾರಾ ತಮ್ಮ ತಂದೆಗೆ ಆಧುನಿಕ ಪದಗಳ ಅರ್ಥವನ್ನು ವಿವರಿಸುತ್ತಾ, ಬಟ್ಟೆ ಶೈಲಿಯಲ್ಲಿನ ವ್ಯತ್ಯಾಸಗಳನ್ನು ತೋರಿಸುತ್ತಾರೆ. ಈ ಜಾಹೀರಾತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮತ್ತು ತಂದೆ-ಮಗಳ ಅದ್ಭುತ ಬಾಂಧವ್ಯವನ್ನು ತೋರಿಸಿದೆ.
3.‘45’ ಚಿತ್ರದ ಟೀಸರ್ ರಿಲೀಸ್ಗೆ ದಿನಾಂಕ ಫಿಕ್ಸ್
ನಟ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ‘45’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗಲೇ ಕುತೂಹಲ ಹೆಚ್ಚಿತ್ತು. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಅದಕ್ಕೆ ಕೊನೆಗೂ ಉತ್ತರ ಸಿಗುವ ಸಮಯ ಬಂದಿದೆ. ಹೌದು, ಯುಗಾದಿ ಪ್ರಯುಕ್ತ ಮಾರ್ಚ್ 30ರಂದು ‘45’ ಚಿತ್ರದ ಟೀಸರ್ ರಿಲೀಸ್ ಆಗಲಿದೆ.
4.ಕೇರಳ ಉದ್ಯಮಿಯ ದರೋಡೆ ಮಾಡಿದ್ದ ಆರೋಪಿ ಕಾಲಿಗೆ ಗುಂಡೇಟು
ಮೈಸೂರು ಹೊರವಲಯದಲ್ಲಿ ದರೋಡೆ ಪ್ರಕರಣದ ಆರೋಪಿ ಆದರ್ಶ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮಹಜರ್ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆದರ್ಶ್, ಸಬ್ ಇನ್ಸ್ಪೆಕ್ಟರ್ ಮತ್ತು ಪೇದೆಯೊಬ್ಬರನ್ನು ಗಾಯಗೊಳಿಸಿದ್ದ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಆದರ್ಶ್ ಕೇರಳ ಮೂಲದವನು ಮತ್ತು ಹಲವು ದಿನಗಳಿಂದ ಪೊಲೀಸರ ಬಲೆಗೆ ಸಿಗದೆ ಪರಾರಿಯಾಗಿದ್ದ.
5.ಧನಶ್ರೀ-ಚಾಹಲ್ ವಿಚ್ಛೇದನ ಅರ್ಜಿಯಲ್ಲಿದೆ ಶಾಕಿಂಗ್ ವಿಷಯ
ಧನಶ್ರೀ ವರ್ಮ ಮತ್ತು ಯುವೇಂದ್ರ ಚಾಹಲ್ ಅವರು ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಈ ದಂಪತಿಗೆ ವಿಚ್ಛೇದನ ನೀಡಿದೆ. ಇವರ ದಾಂಪತ್ಯ ಕೊನೆ ಆದ ಕೆಲವೇ ದಿನಗಳಲ್ಲಿ ಧನಶ್ರೀ ಹಾಗೂ ಚಾಹಲ್ ಅವರ ವಿಚ್ಛೇದನ ಅರ್ಜಿ ವೈರಲ್ ಆಗಿದೆ. ಇದರಲ್ಲಿ ಕೆಲವು ಶಾಕಿಂಗ್ ವಿಚಾರಗಳು ರಿವೀಲ್ ಆಗಿವೆ. ಇದನ್ನು ನೋಡಿ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇವರ ಮಧ್ಯೆ ಇಷ್ಟೆಲ್ಲ ಆಗಿತ್ತೇ ಎಂದು ಅಚ್ಚರಿ ಹೊರಹಾಕಿದ್ದಾರೆ.
6.ಮೀನುಗಾರರ ಮೇಲೆ ಕೇಸು ದಾಖಲಿಸಿರುವುದನ್ನು ಖಂಡಿಸಿ ಪ್ರತಿಭಟನೆ
ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೀನುಗಾರರ ಮೇಲೆ ಕೇಸು ದಾಖಲಿಸಿರುವುದನ್ನು ಖಂಡಿಸಿ ನಡೆದ ಪ್ರತಿಭಟನಾ ವೇದಿಕೆಯಲ್ಲಿ ಉಡುಪಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡುತ್ತಿದ್ದಂತೆಯೇ, ರಾಜಕೀಯ ಪ್ರಸ್ತಾಪಿಸದಂತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
7.ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ
ಅಮಿತ್ ಶಾ ಅವರು ಹಿಂದಿ ಹೇರಿಕೆ ಆರೋಪಗಳನ್ನು ರಾಜ್ಯಸಭೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಡಿಸೆಂಬರ್ನಿಂದ ರಾಜ್ಯಗಳೊಂದಿಗೆ, ಜನರೊಂದಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ ನಡೆಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಅವರು, ಕರ್ನಾಟಕದ ಜತೆ ಕನ್ನಡದಲ್ಲಿ ಹಾಗೂ ಇತರ ರಾಜ್ಯಗಳ ಜತೆ ಆಯಾ ರಾಜ್ಯಗಳ ಭಾಷೆಯಲ್ಲೇ ಪತ್ರ ವ್ಯವಹಾರ ನಡೆಸಲಿದ್ದಾರೆ.
8.ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಮೆಟ್ರೋ, ಬಸ್, ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಮತ್ತೊಂದು ಆಘಾತ ನೀಡಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ. ನಂದಿನಿ ಹಾಲಿನ ಬೆಲೆ 5 ರೂ. ಹೆಚ್ಚಳ ಮಾಡುವ ಪ್ರಸ್ತಾವ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರ ಜತೆ ಸಭೆ ನಡೆಯಲಿದ್ದು, ಅಂತಿಮ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.
9.ಸೈಬರ್ ವಂಚನೆಗಾಗಿ ಬಡ ಜನರ ಬ್ಯಾಂಕ್ ಖಾತೆ ಬಳಕೆ, ಇಬ್ಬರ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನ್ಲೈನ್ ವಂಚನೆಗೆ ಬಡ ಜನರ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಚಿಲ್ಲರೆ ಹಣ ನೀಡಿ ಬಡ ಜನರ ಕೈಯಿಂದ ಖಾತೆ ತೆರೆಸಿ, ಆ ಖಾತೆಗಳನ್ನು ಸೈಬರ್ ವಂಚಕರಿಗೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ
10.ಪ್ರಾಣಿ-ಪಕ್ಷಿಗಳ ದಾಹ ಇಂಗಿಸುತ್ತಿರುವ ಯುವಕರು
ಬೀದರ್ನಲ್ಲಿ ಭೀಕರ ಬಿಸಿಲಿನಿಂದ ಪ್ರಾಣಿ-ಪಕ್ಷಿಗಳು ನಲುಗುತ್ತಿವೆ. ನೀರಿನ ಕೊರತೆಯಿಂದಾಗಿ ಅವುಗಳಿಗೆ ತೊಂದರೆಯಾಗುತ್ತಿದೆ. ಆದರೆ, ಸ್ವಾಭಿಮಾನಿ ಗೆಳೆಯರ ಬಳಗದ ಯುವಕರು ಅರಣ್ಯ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಪ್ರಾಣಿ-ಪಕ್ಷಿಗಳಿಗೆ ನೀರು ಒದಗಿಸುತ್ತಿದ್ದಾರೆ. ಇದು ಅವರ ಅದ್ಭುತ ಸೇವೆಯಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿರುವ ಜೀವಿಗಳಿಗೆ ನೆರವಾಗುತ್ತಿದೆ.