ಕೊಡಗು: ಕ್ರಿಕೆಟ್ ಬ್ಯಾನರ್ (Cricket Banner) ಕಟ್ಟುವಾಗ ವಿದ್ಯುತ್(Electric) ಸ್ಪರ್ಷಸಿ ಯುವಕ ಸಾವನ್ನಪ್ಪಿರುವ ಘಟನೆ ಮಡಿಕೇರಿ (Madikeri) ತಾಲೂಕಿನ ಮೂರ್ನಾಡಿನಲ್ಲಿ ನಡೆದಿದೆ.
ಆರಿಫ್ (34) ಮೃತಪಟ್ಟ ಯುವಕ, ಮೂರ್ನಾಡು ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೊಂಡಿತ್ತು. ಇದ್ದಕ್ಕಾಗಿ ಗೆಳೆಯರೆಲ್ಲ ಸೇರಿ ಬ್ಯಾನರ್ ಕಟ್ಟುವಾಗ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮುಂದಿನ 6 ದಿನಗಳ ಕಾಲ ರಾಜ್ಯಕ್ಕೆ ಮಳೆಯ ಮುನ್ಸೂಚನೆ
ಆಕಸ್ಮಿಕವಾಗಿ ನಡೆದ ವಿದ್ಯುತ್ ಅವಘಡ ಸಂಭವಿಸಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಗಿದೆ. ಮೂರ್ನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮುಂದುವರೆಯಲಿದೆ JDS-BJP ಮೈತ್ರಿ: ಬಿಎಸ್‌ವೈ

