ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಿಂದ ಮತ್ತೊಂದು ಭರ್ಜರಿ ಅಪ್‌ಡೇಟ್ ಹೊರಬಿದ್ದಿದೆ. ‘ಕೆಜಿಎಫ್’ ಯಶಸ್ಸಿನ ನಂತರ ಯಶ್ ರೆಡಿಯಾಗಿರುವ ಈ ಹೊಸ ಚಿತ್ರಕ್ಕೆ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿದೆ. 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಗೆ ಬರಲು ‘ಟಾಕ್ಸಿಕ್’ ಸಜ್ಜಾಗಿದೆ. ಯಶ್ ಹಾಗೂ ಗೀತು ಮೋಹನ್‌ದಾಸ್ ಕಥೆ ಬರೆದು, ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಅಭಿಮಾನಿಗಳು ಕೌಂಟ್‌ಡೌನ್ ಮಾಡುತ್ತಿರುವ ನಡುವೆ, ಚಿತ್ರತಂಡದಿಂದ ಹೊಸ ಲುಕ್ ಅನ್ನು ಅನಾವರಣ ಮಾಡಲಾಗಿದೆ. ರಕ್ತಸಿಕ್ತ ದೇಹ, ಬೆನ್ನಿನ ಮೇಲೆ ವಿಭಿನ್ನ ಟ್ಯಾಟೂ, ಎದುರಾಳಿಗಳ ಜೊತೆ ನಡೆದ ಘರ್ಷಣೆಯನ್ನು ತೋರುವ ರೀತಿಯ ಭಾವಭಂಗಿ— ಇವುಗಳಿಂದ ಯಶ್ ಅವರ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೊತೆಗೆ ಸಿನಿಮಾ ತೆರೆಗೆ ಬರಲು ಇನ್ನೂ 100 ದಿನಗಳು ಮಾತ್ರ ಬಾಕಿ ಇದೆ ಎಂಬುದನ್ನು ತಂಡ ನೆನಪಿಸಿದೆ.
ಹಿಂದೆ ಯಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಟಾಕ್ಸಿಕ್’ ತಂಡವು ಫ್ಯಾನ್ಸ್‌ಗಾಗಿ ಸ್ಪೆಷಲ್ ಗಿಫ್ಟ್ ನೀಡಿತ್ತು. ಈ ಬಾರಿ 2026ರ ಜನವರಿ 8ರಂದು ರಾಕಿಭಾಯ್ ಹುಟ್ಟುಹಬ್ಬದ ಸಮಯದಲ್ಲಿ ಮತ್ತೊಂದು ಸರ್ಪ್ರೈಸ್ ಸಿಗಬಹುದೇ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಈ ಬಾರಿ ಹುಟ್ಟುಹಬ್ಬದ ಗಿಫ್ಟ್ ಬಗ್ಗೆ ತಂಡದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
ಸದ್ಯಕ್ಕೆ ಯಶ್ ತಮ್ಮ ಸಂದೇಶದಲ್ಲಿ, “2026ರ ಮಾರ್ಚ್ 19ಕ್ಕೆ ನಾನು ಬರ್ತಿದ್ದೀನಿ” ಎಂದು ಅಭಿಮಾನಿಗಳಿಗೆ ಖಚಿತ ಪಡಿಸಿದ್ದಾರೆ. ಚಿತ್ರದ ಸಂಗೀತ ಸಂಯೋಜನೆಗೆ ರವಿ ಬಸ್ರೂರ‍್ ಮೈತ್ರಿ ನೀಡಿದ್ದಾರೆ.

