ತುಮಕೂರು : ತುಮಕೂರು ಮಹಾನಗರ ಪಾಲಿಕೆ ಅಧಿಕಾರಿ ಹಾಗೂ ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಲು ಹಲವಾರು ಮನವಿ ಪತ್ರಗಳನ್ನು ನಗರಾಭಿವೃದ್ಧಿ ಸಚಿವರಿಗೆ ಮತ್ತು ಸರ್ಕಾರದ ಕಾರ್ಯದರ್ಶಿಗಳಿಗೆ ಸಲ್ಲಿಸಿದರು ನಮ್ಮ ಮನವಿಯನ್ನು ಸ್ಪಂದಿಸದೆ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಕರ್ತವ್ಯಕ್ಕೆ ರಜೆ ಹಾಕಿ ತುಮಕೂರು ಮಹಾನಗರ ಪಾಲಿಕೆ ಮುಂಭಾಗ ಹಲವಾರು ನೌಕರರು ಸರ್ಕಾರದ ವಿರುದ್ಧ ಘೋಷಣೆ ಕೂಗುವುದರ ಮೂಲಕ ಪ್ರತಿಭಟನೆ ನಡೆಸಿದರು,,
ಪ್ರಮುಖ ಬೇಡಿಕೆಗಳು :
ಏಳನೇ ವೇತನ ಆಯೋಗದ ಪರಿಸ್ಕೃತ ವೇತನ ಸೌಲಭ್ಯವನ್ನು ಮಹಾನಗರ ಪಾಲಿಕೆ ನೌಕರರಿಗೆ ಒದಗಿಸಲು ಅನುದಾನವನ್ನು ಆರ್ಥಿಕ ಇಲಾಖೆಯಿಂದಲೇ ಬಿಡುಗಡೆಗೊಳಿಸಬೇಕು, 2022 23 ಮತ್ತು 202324ನೇ ಸಾಲಿನಲ್ಲಿ ನೇಮಕಾತಿ ಮಾಡಲಾದ ಪೌರಕಾರ್ಮಿಕರ ವೇತನವನ್ನು ಸ್ವಂತ ಸಂಪನ್ಮೂಲಗಳಿಂದ ಭರಿಸಲು ಹೊರಡಿಸಲಾಗಿರುವ ಆದೇಶವನ್ನು ಹಿಂಪಡೆದು ಸದರಿ ಪೌರಕಾರ್ಮಿಕರ ವೇತನ ಪಾವತಿಗೆ ಅವಶ್ಯವಿರುವ ಸಂಪೂರ್ಣ ಅನುದಾನವನ್ನು ಸರ್ಕಾರದಿಂದಲೇ ಬಿಡಿಸಿ ಓಡಿಸಬೇಕು ಎಂದು ಮಾತನಾಡಿದರು,,
ರಾಜ್ಯದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೆಎಂಸಿ ಆಪ್ 1976 ಸೆಕ್ಷನ್ 83ರಂತೆ ಹಾಗೂ ಕೆಎಂಎಎಸ್, ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆಎಂಎಎಸ್ ಹುದ್ದೆಗೆ ಮುಂಬಡ್ತಿ ನೀಡಿರುವುದಿಲ್ಲ, 2022 ರ ಕೆಎಂಎಎಸ್ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸಬೇಕು ಎಂದು ತಿಳಿಸಿದರು,,
ಸಾರ್ವಜನಿಕರಿಗೆ 28 ಸೇವೆಗಳನ್ನು ಒದಗಿಸುತ್ತಿದ್ದೇವೆ, ನಮಗೂ ಸಹ ಸರ್ಕಾರಿ ನೌಕರರಂತೆ ಪರಿಗಣಿಸಬೇಕು, ಸರ್ಕಾರದಲ್ಲಿ ಸಿಗುವಂತಹ ಸವಲತ್ತುಗಳನ್ನು ನಮಗೂ ಕಲ್ಪಿಸಬೇಕು,ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯಸೂಚಿಯನ್ನು ನಗರ ಅಭಿವೃದ್ಧಿ ಇಲಾಖೆ ಅಡಿ ಬರುವ ಮಹಾನಗರ ಪಾಲಿಕೆಗಳ ಸಿಬ್ಬಂದಿಗಳು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ವಿಸ್ತರಿಸಿ ಅನುಷ್ಠಾನಗೊಳಿಸಬೇಕು ಎಂದು ನೌಕರರ ಸಂಘದ ಕಾರ್ಯದರ್ಶಿಯಾದ ಶಬೀರ್ ಅಹಮದ್ ರವರು ಮಾತನಾಡಿದರು,,
ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳಾದ ಕೆ ಜಿ ಐ ಡಿ, ಜಿಪಿಎಫ್, ಜೆಐಎಸ್, ಸರ್ಕಾರಿ ಎಚ್ ಆರ್ ಎಂ ಎಸ್ ಮೂಲಕ ಸೇವ ದಾಖಲೆಗಳ ನಿರ್ವಹಣೆ ಮತ್ತು ವೇತನ ಪಾವತಿಗಳನ್ನು ಮಹಾನಗರ ಪಾಲಿಕೆ ನೌಕರರ ವಿಸ್ತರಿಸಬೇಕು ಎಂದು ಮಾತನಾಡಿದರು,,
ನಮ್ಮ ಈ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಕರ್ನಾಟಕ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಸರ್ಕಾರಕ್ಕೆ ಮಹಾನಗರ ಪಾಲಿಕೆ ನೌಕರರು ಖಡಕ್ ಎಚ್ಚರಿಕೆ ನೀಡಿದರು,,
ನೀ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಗೌರವ ಅಧ್ಯಕ್ಷರಾದ ಆಂಜಿನಪ್ಪ,ನೌಕರರ ಸಂಘದ ಕಾರ್ಯದರ್ಶಿ ಶಬೀರ್ ಅಹಮದ್, ಹಲವಾರು ಮಹಾನಗರ ಪಾಲಿಕೆ ನೌಕರರು ಸೇರಿ ಪ್ರತಿಭಟನೆ ನಡೆಸಿದರು,,,
ವರದಿ ನರಸಿಂಹರಾಜು ಸಂಪೂರ್ಣ ನ್ಯೂಸ್

