ಹೊಸಪೇಟೆ : ಇಲ್ಲಿನ ತುಂಗಭದ್ರಾ ಅಣೆಕಟ್ಟೆಯ 19 ನೇ ಗೇಟ್ ಚೈನ್ ತುಂಡಾಗಿ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, 35 ಸಾವಿರ ಕ್ಯುಸೆಕ್ಸ್ ಗೂ ಅಧಿಕ ನೀರು ಪೋಲಾಗುತ್ತಿದೆ. ಘಟನೆ ಪರಿಣಾಮ, ಈ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ತುರ್ತು ಕ್ರಮ ಕೈಗೊಳ್ಳಲಾಗಿದೆ.
ರಾತ್ರಿ 11:10 ರ ಸುಮಾರಿಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ನಂ:-19 ರ ಚೈನ್ ಲಿಂಕ್ ಕಟ್ ಆಗಿದ್ದು,ಗೇಟ್ ಕಾಣಿಸುತ್ತಿಲ್ಲ, ಭಾರೀ ಪ್ರಮಾಣದ ನೀರು (ಗೇಟ್ ನಂ:-19 ರಿಂದಲೇ ಸರಿಸುಮಾರು 35000 ಕ್ಯೂಸೆಕ್ಸ್) ನದಿಗೆ ಹೋಗುತ್ತಿದೆ.
ಈ ಅವಘಡದ ಹಿನ್ನೆಲೆಯಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು, ಸಚಿವರೊಂದಿಗೆ ಹಾಗೂ ಜಲಸಂಪನ್ಮೂಲ ಇಲಾಖೆಯ ಮುಖ್ಯಕಾರ್ಯದರ್ಶಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಅಣೆಕಟ್ಟಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಿದರು.
ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರಿಗೆ ಜಾಗರೂಕತೆಯಿಂದಿರಲು ಸೂಚಿಸುವಂತೆ ಕ್ರಮವಹಿಸಲು ತಿಳಿಸಿದರು. ಗೇಟ್ ನಂ.19 ರಿಂದ ಅಂದಾಜು 35 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು 48 ಸಾವಿರ ಕ್ಯೂಸೆಕ್ ನದಿಗೆ ಬಿಡಲಾಗುತ್ತಿದೆ.

