ವಿಜಯಪುರ: ವಕ್ಫ್ ಆಸ್ತಿಗಳ ಬಗ್ಗೆ ಜಿಲ್ಲೆಯಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗಿದೆ. ರಾಜ್ಯ, ರಾಷ್ಟ್ರೀಯ ಮಾಟ್ಟದಲ್ಲಿ ಸುದ್ದಿಯಾಗಿದೆ. ವಿಜಯಪುರ ಜಿಲ್ಲೆಯ ಹೊನವಾಡದಲ್ಲಿ 1200 ಎಕರೆ ರೈತರ ಭೂಮಿ ವಕ್ಫ್ ಆಸ್ತಿ ಆಗಿದೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ ಈ ವಿಷಯದಲ್ಲಿ ಯಾರಿಗೂ ನೋಟೀಸ್ ನೀಡಿಲ್ಲ. ಉತಾರಿಯಲ್ಲಿ ರೈತರ ಹೆಸರಿದೆ ಎಂದು ಸಚಿವ ಎಂ. ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
1974 ರ ಬಜೆಟ್ ನಲ್ಲಿ ವಿಜಯಪುರ ನಗರ ಮಹಾಲ ಭಾಗಾಯತ ಖಾಜಾ ಅಮೀನ್ ದರ್ಗಾ ಸರ್ವೇ ನಂಬರ್ ಹೊನವಾಡ ಎಂದು ಹಾಕಲಾಗಿತ್ತು. ಬಳಿಕ 1977 ರಲ್ಲಿ ತಪ್ಪನ್ನು ಸರಿಪಡಿಸಿದ್ದಾರೆ. 10 ಎಕರೆ 39 ಗುಂಟೆ ಮಾತ್ರ ನೊಟಿಫಿಕೇಷನ್ ಇದೆ. ಜಿಲ್ಲೆಯಲ್ಲಿ 125 ನೊಟೀಸ್ ಹೋಗಿವೆ. ಅದರಲ್ಲಿ 433 ರೈತರು ಇದ್ದಾರೆ.
ಮ್ಯುಟೇಷನ್ ಕಾಲಂ 9 ರಲ್ಲಿ ಒಂದು ಎಕರೆ ಆಸ್ತಿಯೂ ಬದಲಾವಣೆ ಆಗಿಲ್ಲ. ಕಾಲಂ 11 ರಲ್ಲಿ ಇಂಡಿಯಲ್ಲಿ 41 ಸರ್ವೇ ನಂಬರ್‌ಗಳು ವಿಥೌಟ್ ನೊಟೀಸ್ ವಕ್ಫ್ ಆಸ್ತಿ ಎಂದು ಇಂದಿಕರಣ ಮಾಡಿದ್ದಾರೆ. ಅದನ್ನು ಈಗ ಉಪವಿಭಾಗಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ತೆಗೆದುಕೊಂಡು ವಿಚಾರಣೆ, ಪರಿಶೀಲನೆ ಮಾಡುತ್ತಿದ್ದಾರೆ ಎಂದರು.
ಚಡಚಣದಲ್ಲಿ 3 ಪ್ರಕರಣಗಳು ಇವೆ. ಒಟ್ಟು ಗೊಂದಲ ಸೃಷ್ಠಿ ಮಾಡಿದ್ದು, ಸುಳ್ಳು ಮಾತನಾಡುತ್ತಿದ್ದಾರೆ. 14201 ಎಕರೆ ವಕ್ಫ್ ಆಸ್ತಿ ಇವೆ. 1459 ಎಕರೆ ಹೋಗಿದೆ ಲ್ಯಾಂಡ್ ಫಾರ್ಂ ಆಕ್ಟ್ ನಲ್ಲಿ 11835 ಸಾವಿರ ಎಕರೆ ಉಳಿದಿದೆ. ಇಂದಿಕರಣ ಮಾಡದೆ ಇರುವುದರಿಂದ ಸರಕಾರ ಕೊಟ್ಟಿದೆ.
ಕಾನೂನು ಅಭಿಪ್ರಾಯ ತಗೆದುಕೊಂಡು ನಿರ್ಣಯ ಮಾಡಲಿದೆ ಎಂದರು. 12083 ಎಕರೆಯಲ್ಲಿ ಶೇ. 70 ರಷ್ಟು ಮುಸ್ಲಿಂ ಆಸ್ತಿಗಳು ಇವೆ. ಉಳಿದ ಶೇ. 30ರಲ್ಲಿ ಮುಸ್ಲಿಮರು ಅವರು ಹಿಂದೂಗಳಿಗೆ ಆಸ್ತಿ ಮಾರಾಟ ಮಾಡಿದ್ದಾರೆ. ಮುಂದೆ ಸರಕಾರದ ಮಾರ್ಗದರ್ಶನ ಪಡೆದು ಮುಂದುವರೆಯುತ್ತೇವೆ. ಸಿಂದಗಿ ತಾಲೂಕಿನ ಯರಗಲ್‌ನಲ್ಲಿ 1974 ರಲ್ಲಿ 130 ಸರ್ವೇ ನಲ್ಲಿ 13 ಎಕರೆ ಗೆಜೆಟ್ ಆಗಿದೆ. 1030 ರ ದಾಖಲೆ ರೈತರು ಕೊಟ್ಟಮೇಲೆ ಅದನ್ನು ವಕ್ಫ್ ನವರು ಕೈ ಬಿಟ್ಟಿದ್ದಾರೆ.
ಗುರುಸಿದ್ದಲಿಂಗ ಸ್ಬಾಮಿ ವಿರಕ್ತಮಠ 1 ಎಕರೆ 36 ಗುಂಟೆ ಸರ್ವೇ 1020, ವಕ್ಫ್ ಸರ್ವೇ 1029 ಇದೆ. ಆದರೆ ತಪ್ಪಾಗಿ 1020 ಎಂದು ಗೆಜೆಟ್ ಆಗಿದೆ. ಅದು ಪರಿಶೀಲನೆ ಆಗಿದೆ. ಇಂದಿಕರಣ ಮಾಡುವಾಗ ತಪ್ಪಾಗಿದೆ. ಅದನ್ನು ಸರಿಯಾಗುತ್ತದೆ. ಜಿಲ್ಲಾಧಿಕಾರಿ ಟಿ. ಭೂಬಾಲನ್ ನೇತೃತ್ವದಲ್ಲಿ ಟಾಸ್ಕ ಫೋರ್ಸ್ ರಚನೆ ಮಾಡಲಾಗಿದೆ.
ಅಪರ ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರಗಳು ಈ ಟಾಸ್ಕ್ ಫೋರ್ಸ್ ನಲ್ಲಿ ಇದ್ದಾರೆ ಎಂದರು.1974 ರಲ್ಲಿ ಗೆಜೆಟ್ ಆಗಿದೆ. 1974 ಕ್ಕೂ ಮುಂಚೆಯಿಂದ ಇರುವ ದಾಖಲೆ ತೆಗೆದು ಪರಿಶೀಲನೆ ಮಾಡಿಸುತ್ತಿದ್ದಾರೆ. ಎಲ್ಲಾ ಗೊಂದಲಗಳು ಬಗೆಹರಿಯಲಿವೆ. 100 ಪರ್ಸೆಂಟ್ ಮುಸ್ಲಿಂ ಆಸ್ತಿಗಳು ಇವೆ. ಕೆಲವರು ಹಿಂದೂಗಳಿಗೆ ಮಾರಾಟ ಮಾಡಿದ್ದಾರೆ.
ಇನಾಮು, ಭೂಸುಧಾರಣೆ ಕಾಯಿದೆಯಲ್ಲಿ ಕೆಲವು ಭೂಮಿ ಹಂಚಿಕೆಯಾಗಿವೆ. ಅವರಿಗೆ ನೊಟೀಸ್ ಕೊಟ್ಟಿಲ್ಲ. 12083 ಎಕರೆ ಮುಸ್ಲಿಂ ಆಸ್ತಿಗಳು ಇವೆ. ಯಾರೂ ಜಿಲ್ಲೆಯಲ್ಲಿ ಆತಂಕಪಡುವ ಪ್ರಶ್ನೆಯೇ ಇಲ್ಲ. ಎಲ್ಲದಕ್ಕೂ ಪರಿಹಾರವಿದೆ. ವಕ್ಫ್ ಟ್ರಿಬ್ಯೂಲನ್ ಕೇವಲ ವಕ್ಫ್ ನಡೆಸುವುದಿಲ್ಲ. ಅಲ್ಲಿಯೂ ನ್ಯಾಯಾಧೀಶರು ಇರುತ್ತಾರೆ. ಹಿಂದೂ ನ್ಯಾಯಾಧೀಶರೂ ಇರುತ್ತಾರೆ. ಹೈಕೋರ್ಟ್ ಈ ನ್ಯಾಯಾಧೀಶರನ್ನು ನೇಮಕ ಮಾಡುತ್ತದೆ. ತಿಕೋಟಾ ತಾಲೂಕಿನಲ್ಲಿ ಯಾರಿಗೂ ನೊಟೀಸ್ ಕೊಟ್ಟಿಲ್ಲ ಎಂದರು.