ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ಮತ್ತು ಜೆಡಿಎಸ್ ನವರು ಕೊಡುವ ಕಾಟಕ್ಕಿಂತ ಒಳಗಿನ ಕಾಂಗ್ರೆಸ್ ನವರ ಕಾಟವೇ ಹೆಚ್ಚಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ಅವರು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಹಾರಾಷ್ಟ್ರ,ಬಿಹಾರ,ಜಾರ್ಖಂಡ ಈ ಮೂರು ರಾಜ್ಯಗಳಲ್ಲೂ ಸಹ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿ.ಸೋಮಣ್ಣ ಭವಿಷ್ಯ ನುಡಿದರು.
ಹರ್ಯಾಣ ರಾಜ್ಯದಲ್ಲಿ ಬಿಜೆಪಿ ಮತ್ತೆ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಜಮ್ಮ ಕಾಶ್ಮೀರ ದಲ್ಲೂ ಮುಂದಿನ ದಿನಗಳಲ್ಲಿ ಬದಲಾವಣೆ ಗಾಳಿ ಬಿಸುತ್ತದೆ ಎಂದ ಸೋಮಣ್ಣ ಬಿಹಾರದಲ್ಲಿ ಆರ್ ಜೆ ಡಿ ಆಟ ನಡೆಯದು,ಮೋದಿ ಬಗ್ಗೆ ದೇಶದ ಜನತೆಗೆ ವಿಶೇಷ ಕಾಳಜಿ ಇದೆ.ಭಾರತಕ್ಕೆ ಮೋದಿ ಅವಶ್ಯಕತೆ ಇದೆ ಎಂದು ಸೋಮಣ್ಣ ಹೇಳಿದರು.
ಇಂಡಿಯಾ ಮೈತ್ರಿಕೂಟದಲ್ಲಿದ ಶರದ್ ಪವರ್,ಶಿವಸೇನೆಯ ಠಾಕ್ರೆ ಎಲ್ಲಾರೂ ಬದಲಾವಣೆ ಯಾಗಿದ್ದಾರೆ.ಮೋದಿ ಜೊತೆ ನೆನ್ನೆ ನಾಲ್ಕು ಗಂಟೆಗೂ ಹೆಚ್ಚು ಕಾಲವಿದೆ,ಅವರಿಗೆ ದೇಶದ ಬಗ್ಗೆ ಇರುವ ಕಮ್ಟಿಮೆಂಟ್ ನ್ನು ಹತ್ತಿರದಿಂದ ಗಮನಿಸಿದೆ.ಬಿಜೆಪಿ ಗೆ ಮೋದಿಯಂತ ನಾಯಕ ಸಿಕ್ಕಿದು ನಮ್ಮ ಪುಣ್ಯ ಎಂದು ಕೊಂಡಾಡಿದರು.
ಜಿಲ್ಲೆಗೆಹಲವು ರೈಲ್ವೆ ಯೋಜನೆಗಳನ್ನು ತಂದಿದೇನೆ,ಕನ್ನಡದಲ್ಲೆ ರೈಲ್ವೆ ಪರೀಕ್ಷೆ ಬರೆಯಲು ಆದೇಶ ಮಾಡಲಾಗಿದೆ. ಈ ಹಿಂದೆ ಇದ್ದ ಜಾಪರ್ ಷರಿಫ್,ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಕನ್ನಡದಲ್ಲೆ ಪರೀಕ್ಷೆ ಬರೆಯಲು ಅನುಮತಿ ನೀಡಿರಲಿಲ್ಲ ಎಂದು ಪ್ರಶ್ನೆ ಮಾಡಿದರು.

