ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯನ್ನೇ ಡಿಲೀಟ್ (Delete) ಮಾಡಿದ್ದಾರೆ.
ಕಿಡ್ನಾಪ್ ಹಾಗೂ ಮರ್ಡರ್ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ದರ್ಶನ್ (Darshan) ಅವರನ್ನು ಅನ್‌ಫಾಲೋ ಮಾಡಿ, ಡಿಪಿ ರಿಮೂವ್ ಮಾಡಿದ್ದರು. ಆದರೆ ಇಂದು ವಿಜಯಲಕ್ಷ್ಮಿ ಇನ್ ಸ್ಟಾಗ್ರಾಂ ಖಾತೆಯಿಂದಲೇ ಹೊರ ನಡೆದಿದ್ದಾರೆ. ಅಂದರೆ ಇನ್‌ಸ್ಟಾ ಖಾತೆಯನ್ನು ಅವರು Dactivate ಮಾಡಿದ್ದಾರೆ. ಇದನ್ನೂ ಓದಿ: ಬ್ರಾ ಸೈಜ್ ಮೇಲೆ ಹುಡುಗಿಯರನ್ನು ಕಾಣುತ್ತಾರೆ – ಇಲಾನ್ ಮಸ್ಕ್ ವಿರುದ್ಧ ಮಾಜಿ ಉದ್ಯೋಗಿಗಳ ಆರೋಪ

ಬಳಕೆದಾರರು ಇನ್‌ಸ್ಟಾದಲ್ಲಿ ಮೆಸೇಜ್ ಮಾಡಿ ನಿಂದನೆ ಮಾಡುತ್ತಾ ಇದ್ದಿದ್ದರಿಂದ ಬೇಸರಗೊಂಡು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿಜಯಲಕ್ಷ್ಮಿ ಅವರು Dactivate ಮಾಡಲು ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.ಇದನ್ನೂ ಓದಿ: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಇಟಲಿಗೆ ಮೋದಿ ಮೊದಲ ಭೇಟಿ