ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆಯರು
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ
ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆಯರು
ಗ್ರಾಮದ ಮಹಿಳೆಯರ ದೈನಂದಿನ ಅಪಾಯಕಾರಿ ನಡವಳಿಕೆ
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ, ಪೇಥ್ ತಾಲೂಕಿನ ಬೋರಿಚಿವರಿ ಗ್ರಾಮದಲ್ಲಿ ತೀವ್ರ ನೀರಿನ ಬಿಕ್ಕಟ್ಟು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಬೇರೆ ದಾರಿಯಿಲ್ಲದೆ ಆ ಮಹಿಳೆಯರು ಕೆಲವು ಬಿಂದಿಗೆ ನೀರು ತರಲು ಶಿಥಿಲಗೊಳ್ಳುತ್ತಿರುವ ಬಾವಿಗಳಿಗೆ ಇಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆಯರು ಹಗ್ಗವನ್ನು ಹಿಡಿದು ಆಳವಾದ ಬಾವಿಯೊಳಗೆ ಇಳಿದು ಕೊಡದಲ್ಲಿ ನೀರು ಹೊತ್ತು ಮೇಲಕ್ಕೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಈ ಗ್ರಾಮದ ಮಹಿಳೆಯರ ದೈನಂದಿನ ಅಪಾಯಕಾರಿ ನಡವಳಿಕೆಯಾಗಿದೆ.

