ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಕೇಂದ್ರ ಸರ್ಕಾರ ಆದೇಶ
ಬೆಂಗಳೂರಲ್ಲೂ ಮೊಳಗಲಿದೆ ಯುದ್ಧದ ಸೈರನ್
ಮಾಕ್ ಡ್ರಿಲ್ ವೇಳೆ ಜನರು ಏನ್ ಮಾಡ್ಬೇಕು?
ರಾಜ್ಯದ ಮೂರು ಜಿಲ್ಲೆಗಳಲ್ಲಿ ಯುದ್ಧದ ಅಣುಕು ಪ್ರದರ್ಶನ
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಹೊತ್ತಲ್ಲಿ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಡೆಲ್ಲಿಯಿಂದ ಹಳ್ಳಿವರೆಗೂ ಈ ಕವಾಯತು ನಡೆಸಲು ಸೂಚಿಸಲಾಗಿದೆ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅಣಕು ಪ್ರದರ್ಶನ ನಡೆಯಲಿದೆ. ಬೆಂಗಳೂರು, ರಾಯಚೂರು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಅಗ್ನಿಶಾಮಕ ದಳ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿಕೆ ನೀಡಿದ್ದಾರೆ.
ರಾಜ್ಯದ ಮೂರು ಜಿಲ್ಲೆಗಳಲ್ಲಿ ಯುದ್ಧದ ಅಣುಕು ಪ್ರದರ್ಶನ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಅಗ್ನಿಶಾಮಕ ದಳ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ತಿಳಿಸಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದ್ದು, ಈ ಬಗ್ಗೆ ಈಗ ಕೇಂದ್ರ ಅಗ್ನಿಶಾಮಕ ದಳ , ಸಿವಿಲ್ ಡಿಫೈನ್ಸ್ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆ ಸಂಬಂಧಿಸಿದಂತೆ ಹೆಚ್ಚು ಬೇಸ್ ಗಳು ಹಾಗೂ ಕಚೇರಿಗಳಿದ್ದು, ಸಂಜೆ 4 ಗಂಟೆ ಮಾಡಲು ನಿರ್ಧಾರ ಮಾಡಲಾಗಿದೆ. NCC, NSS, ಸಿವಿಲ್ ಡಿಫೈನ್ಸ್, ಡಾಕ್ಟರ್ ಗಳು, ಭಾಗಿಯಾಗುತ್ತಾರೆ. ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳ ಪೊಲೀಸ್ ಠಾಣೆಗಳ ಮೇಲೆ ಸೈರನ್ ಇರಲಿದೆ. 35 ಕಡೆ ಇದ್ದು,.ನಿನ್ನೆ ತಡರಾತ್ರಿಯೇ ಸಿವಿಲ್ ಡಿಫೆನ್ಸ್ ಕಚೇರಿಗೆ ಮೇಲ್ ರವಾನೆ ಆಗಿದ್ದು, ಶತ್ರುಗಳ ದಾಳಿಯಿಂದ ಜನರನ್ನ ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಆಯಾ ರಾಜ್ಯಗಳ ಸಿವಿಲ್ ಡಿಫೆನ್ಸ್ ಮುಖ್ಯಸ್ಥರಿಗೆ ಮಾಹಿತಿ, ಸಲಹೆಗಳನ್ನ ಮೇಲಾಧಿಕಾರಿಗಳು ನೀಡಿದ್ದಾರೆ.
ಇನ್ನು ಜನರು ಏನ್ ಮಾಡಬೇಕು? ಮಾಡಬಾರದು? ಅನ್ನೋದಾದ್ರೆ
ಜನರು ಏನ್ ಮಾಡಬೇಕು. ಮಾಡಬಾರದು ಎಂಬುದರ ಬಗ್ಗೆ ಕೇಂದ್ರದಿಂದ ಸುತ್ತೋಲೆ ಬರುತ್ತದೆ. ಒಂದು ವಾರದ ಕಾಲ ಅಣುಕು ಪ್ರದರ್ಶನ ನಡೆಯಲಿದೆ ಎಂದು ಅಗ್ನಿಶಾಮಕ ದಳ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಯುದ್ಧ ಸೈರನ್ ಎಂದರೇನು?
“ಯುದ್ಧ ಸೈರನ್” ಒಂದು ದೊಡ್ಡ ಎಚ್ಚರಿಕೆ ವ್ಯವಸ್ಥೆಯಾಗಿದ್ದು, ಯುದ್ಧ, ವಾಯುದಾಳಿ, ಅಥವಾ ವಿಪತ್ತಿನಂತಹ ತುರ್ತು ಸಂದರ್ಭಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತದೆ. ಇದರ ಶಬ್ದವು ಸಾಮಾನ್ಯ ಹಾರ್ನ್, ಆಂಬ್ಯುಲೆನ್ಸ್, ಅಥವಾ ಅಗ್ನಿಶಾಮಕ ವಾಹನದ ಸೈರನ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇದು ನಿರಂತರವಾಗಿ ಏರಿಳಿತಗೊಳ್ಳುವ (ಹೆಚ್ಚು-ಕಡಿಮೆ) ಧ್ವನಿಯನ್ನು ಹೊಂದಿದ್ದು, ಜನರ ಗಮನವನ್ನು ತಕ್ಷಣ ಸೆಳೆಯುವಂತಿರುತ್ತದೆ.
ಸೈರನ್ ಮೊಳಗಿದಾಗ ಜನರು ಏನು ಮಾಡಬೇಕು?
ಅಣಕು ಕವಾಯತಿನ ಸಂದರ್ಭದಲ್ಲಿ:
ಭಯಪಡಬೇಡಿ, ಏಕೆಂದರೆ ಇದು ಕೇವಲ ತರಬೇತಿ ವ್ಯಾಯಾಮವಾಗಿದೆ.
ಸರ್ಕಾರದ ಸೂಚನೆಗಳನ್ನು ಗಮನಿಸಿ (ಟಿವಿ, ರೇಡಿಯೋ, ಅಥವಾ ಮೊಬೈಲ್ ಎಚ್ಚರಿಕೆಗಳ ಮೂಲಕ).
ಕವಾಯತಿನ ಭಾಗವಾಗಿ, ಸುರಕ್ಷಿತ ಸ್ಥಳಕ್ಕೆ ತೆರಳುವ ಅಭ್ಯಾಸವನ್ನು ಮಾಡಿ.
ನಿಜವಾದ ತುರ್ತು ಸಂದರ್ಭದಲ್ಲಿ:
ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ, ಉದಾಹರಣೆಗೆ, ಮನೆಯ ಒಳಗೆ, ಕಟ್ಟಡದ ಒಳಗೆ, ಅಥವಾ ಸರ್ಕಾರವು ಗೊತ್ತುಪಡಿಸಿದ ಬಂಕರ್‌ಗೆ.
ಟಿವಿ, ರೇಡಿಯೋ, ಅಥವಾ ಸರ್ಕಾರದ ಅಧಿಕೃತ ಎಚ್ಚರಿಕೆ ಸಂದೇಶಗಳಿಗೆ ಗಮನ ಕೊಡಿ.
ವದಂತಿಗಳನ್ನು ನಂಬದಿರಿ ಮತ್ತು ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
ಸುರಕ್ಷಿತ ಸ್ಥಳಕ್ಕೆ ತಲುಪಲು ಎಷ್ಟು ಸಮಯ ತೆಗೆದುಕೊಳ್ಳಬೇಕು?
ನಿಜವಾದ ಯುದ್ಧ ಅಥವಾ ವಾಯುದಾಳಿಯಂತಹ ತುರ್ತು ಸಂದರ್ಭದಲ್ಲಿ, ಸೈರನ್ ಮೊಳಗಿದ ತಕ್ಷಣ 5 ರಿಂದ 10 ನಿಮಿಷಗಳ ಒಳಗೆ ಸುರಕ್ಷಿತ ಸ್ಥಳಕ್ಕೆ ತಲುಪಬೇಕು.

