ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಯುವತಿಯೊಬ್ಬಳು ರೈಲ್ವೆ ಹಳಿಯ ಮೇಲೆ ಕಾರನ್ನು ಚಲಾಯಿಸಿ ಸಿಬ್ಬಂದಿಗೆ ಆತಂಕ ಮೂಡಿಸಿರುವ ಘಟನೆ ನಡೆದಿದೆ. ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಹುಚ್ಚಾಟಕ್ಕೆ ಕಾರಣ ಏನೆಂದು ವಿಚಾರಣೆ ನಡೆಸಿದ್ದಾರೆ. ಇದರಿಂದಾಗಿ ಬೆಂಗಳೂರು-ಹೈದರಾಬಾದ್ ರೈಲು ಸೇವೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವ್ಯತ್ಯಯವಾಗಿದೆ.
ರಂಗಾರೆಡ್ಡಿ ಜಿಲ್ಲೆಯ ನಾಗುಲಾಪಲ್ಲಿ-ಶಂಕರ್‌ಪಲ್ಲಿ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಯುವತಿ ಕಾರು ಚಲಾಯಿಸಿದ್ದಾಳೆ. ಪರಿಣಾಮವಾಗಿ ಕೆಲಕಾಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಶಂಕರಪಲ್ಲಿ ಬಳಿ ಇದನ್ನು ಗಮನಿಸಿದ ಸ್ಥಳೀಯರು, ರೈಲ್ವೆ ಸಿಬ್ಬಂದಿ ಕೆಲಕಾಲ ಪೇಚಿಗೆ ಸಿಲುಕಿದ್ದರು. ಕೆಲಕಾಲ ಆತಂಕ ಸೃಷ್ಟಿಯಾಯ್ತು. ಅದೇ ಸಮಯಕ್ಕೆ ಆ ನಿಲ್ದಾಣದ ಮೂಲಕ ಚಲಿಸಬೇಕಿದ್ದ ರೈಲು ಅಲ್ಲಿಗೆ ಬಂದು ಸೇರುವಲ್ಲಿತ್ತು. ರೈಲ್ವೆ ಸಿಬ್ಬಂದಿ ಮಾಹಿತಿ ಮೇರೆಗೆ ಬೆಂಗಳೂರು-ಹೈದರಾಬಾದ್ ರೈಲಿನ ಲೋಕೋ ಪೈಲಟ್‌ಗೆ ಮಾಹಿತಿ ರವಾನಿಸಲಾಯ್ತು. ಆ ಬಳಿಕ ಕೆಲಕಾಲ ಮಧ್ಯದಲ್ಲೇ ರೈಲು ನಿಲ್ಲಿಸಲಾಯ್ತು.
ರೈಲ್ವೆ ಸಿಬ್ಬಂದಿ ಹಾಗೂ ಬೆಂಗಳೂರು-ಹೈದರಾಬಾದ್ ಲೋಕೋಪೈಲಟ್ ಯುವತಿಯನ್ನು ಕಾರಿನಿಂದ ಕೆಳಗಿಸಲು ಹರಸಾಹಸವನ್ನೇ ಪಟ್ಟಿದ್ದಾರೆ. ಕಾರಿನಿಂದ ಇಳಿಯಲು ಒಪ್ಪದಿದ್ದಾಗ ಕೊನೆಗೆ ಯುವತಿಯನ್ನು ಬಲವಂತವಾಗಿ ಕೆಳಗಿಳಿಸಿ, ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

