ಸ್ಟಾರ್ ನಟರ ಸಿನಿಮಾ ಸೆಟ್ಗಳಿಗೆ ಮತ್ತೊಬ್ಬ ಸ್ಟಾರ್ ನಟರು ಭೇಟಿಯಾಗೋದು ಹೊಸದೇನು ಅಲ್ಲ. ಆಗಾಗ ಇಂತಹ ಭೇಟಿಗಳು ಕಲಾವಿದರ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ. ನಟ ಶಿವರಾಜ್ಕುಮಾರ್ ಸಿನಿಮಾ ಶೂಟಿಂಗ್ ಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಿದ್ದಾರೆ.
ಶಿವಣ್ಣ 131ನೇ ಸಿನಿಮಾದ ಶೂಟಿಂಗ್ ಅನ್ನು ಶುರು ಮಾಡಿದ್ದಾರೆ. ಇಬ್ಬರೂ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಷ್ಟೇ ಅಲ್ಲ. ಒಂದೇ ಕಡೆ ಶೂಟಿಂಗ್ ಮಾಡುತ್ತಿದ್ದಾರೆ. ಇದು ಇಬ್ಬರ ಅಭಿಮಾನಿಗಳಿಗೂ ಮತ್ತಷ್ಟು ಖುಷಿ ಕೊಟ್ಟಿದೆ.
‘ಟಾಕ್ಸಿಕ್’ ಸಿನಿಮಾಗಾಗಿ ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದ ಸೆಟ್ ಹಾಕಲಾಗಿದೆ. ಇತ್ತೀಚೆಗೆಷ್ಟೇ ಈ ಸಿನಿಮಾದ ಮುಹೂರ್ತ ಕೂಡ ಆರಂಭ ಆಗಿತ್ತು. ಅತ್ತ ಇದೇ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಶಿವಣ್ಣ ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗಿದೆ. ಇದೇ ವರಮಹಾಲಕ್ಷ್ಮಿ ಹಬ್ಬದಂದು ಶಿವಣ್ಣನ 131ನೇ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಇಬ್ಬರ ಸಿನಿಮಾದ ಶೂಟಿಂಗ್ ಒಂದೇ ಕಡೆ ನಡೆಯುತ್ತಿದೆ.
ಈ ಕಾರಣಕ್ಕೆ ಶಿವಣ್ಣ ನಟಿಸುತ್ತಿದ್ದ 131ನೇ ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ಯಶ್ ಭೇಟಿ ಕೊಟ್ಟಿದ್ದಾರೆ. ಶೂಟಿಂಗ್‌ಗೆ ಹೋಗುವುದಕ್ಕೂ ಮುನ್ನ ಯಶ್ ಸ್ಪಾಟ್‌ಗೆ ಭೇಟಿ ಕೊಟ್ಟು ಶಿವಣ್ಣನನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.





