ಪುಣೆ: ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಯುವಕ ಕುಸಿದುಬಿದ್ದು ಮೃತಪಟ್ಟಿದ್ದಾನೆ.ಈ ರೀತಿ ವಾಕಿಂಗ್ ಗೆ ತೆರಳಿದ್ದ ವ್ಯಕ್ತಿ ಧಿಡೀರ್ ಕುಸಿದುಬೀಳೋದು,ವೇದಿಕೆ ಮೇಲೆ ನೃತ್ಯ ಮಾಡುವಾಗಲೇ ಹಠಾತ್ ಕುಸಿದುಬಿದ್ದು ಮೃತಪಟ್ಟ ಕೆಲ ಘಟನೆಗಳ ವಿಡಿಯೋಗಳು ಕಳವಳ ಹುಟ್ಟುಹಾಕಿದೆ.
ದೇಹ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಜಿಮ್ ನಲ್ಲಿ ಬೆವರಿಳಿಸುವ ವೇಳೆ ಈ ರೀತಿ ಹೃದಯಾಘಾತಕ್ಕೊ ಒಳಗಾದ ಹಲವು ನಿದರ್ಶನಗಳಿದ್ದಾವೆ. ಅದೇ ರೀತಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಪುಣೆಯ 37 ವರ್ಷದ ಮಿಲಿಂದ್ ಕುಲಕರ್ಣಿ ಸಾವನ್ನಪ್ಪಿದ್ದಾನೆ. ಈ ಆತಂಕಕಾರಿ ಘಟನೆಯ ದೃಶ್ಯ ಜಿಮ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಹೀಗೆ ಕುಸಿದು ಬಿದ್ದು ಕೆಲವೇ ಕೆಲವು ಸೆಕೆಂಡ್‌ನಲ್ಲಿ ಮಿಲಿಂದ್ ಸಾವನ್ನಪ್ಪಿದ್ದಾರೆ.
ಈ ವೇಳೆ ಮಿಲಿಂದ್ ಕುಸಿದುಬಿದ್ದ ಕೂಡಲೇ ಜಿಮ್ ನಲ್ಲಿದ್ದ ಇತರೇ ಯುವಕರು ಆತನ ಬಳಿಗೆ ಹೋಗಿ ಏನಾಗಿದೆ ಎಂಬುದನ್ನು ಪರೀಕ್ಷಿಸಿದ್ದಾರೆ. ಆ ಬಳಿಕ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತನನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಆತ ಅದಾಗಲೇ ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ನಿನ್ನೆ (ಆ.1) ಬೆಳಗ್ಗೆ 7.15 ರ ಸುಮಾರಿಗೆ ಪುಣೆಯ ನೈಟ್ರೋ ಜಿಮ್‌ನಲ್ಲಿ ಈ ಘಟನೆ ನಡೆದಿದೆ.
ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಮಿಲಿಂದ್ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಧೃತಪಟ್ಟಿದೆ.ಈ ಘಟನೆ ಮತ್ತೊಮ್ಮೆ ಜಿಮ್ ಪ್ರಿಯರಲ್ಲಿ ಆತಂಕವನ್ನು ಹುಟ್ಟಿಹಾಕಿದೆ.

