ದುಬೈ : ಗಲ್ಫ್ ಕರ್ನಾಟಕ ಕುಟುಂಬ ಆಯೋಜಿಸಿತಿರುವ ಡೂ ಗ್ರೂಪ ಅರ್ಪಿಸುವ ಎಲ್ಲ ಕ್ರಿಕೆಟ್ ಅಭಿಮಾನಿಗಳು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕರ್ನಾಟಕ ಕ್ರಿಕೆಟ್ ಲೀಗ್ (KCL) ಟೂರ್ನಾಮೆಂಟ್‍ನ ಟ್ರೋಫಿ ಮತ್ತು ಆಟಗಾರರ ಅಧಿಕೃತ ಜೆರ್ಸಿ ಲಾಂಚ್ ಕಾರ್ಯಕ್ರಮ 08 ಸೆಪ್ಟೆಂಬರಂದು ದುಬೈನ ಫಾರ್ಚೂನ ಪ್ಲಾಜಾ ಹೋಟೆಲ್ನಲ್ಲಿ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ನೀತಾ ತಾರಾಚಂದಾನಿ (ಹೆಡ್ ಆ ಬಿಸಿನೆಸ್,ವಿಮಾ ಘಟಕ, ಡೂ ಗ್ರೂಪ) ಮತ್ತು ಖ್ಯಾತ ನಿರ್ದೇಶಕ ನಿರ್ಮಾಪಕ ಗೀತ ರಚ್ನೆಕಾರ ಸಿಂಪಲ್ ಸುನಿ, ಗೌರವ ಅತಿಥಿಯಾಗಿ ಕರ್ನಾಟಕ ಸಂಘ ದುಬೈನ ಅಧ್ಯಕ್ಷ ಶ್ರೀ ಶಶಿಧರ್ ನಾಗರಾಜಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಟ್ರೋಫಿ ಹಾಗೂ ಹೊಸ ಜೆರ್ಸಿಗಳನ್ನು ಅನಾವರಣಗೊಳಿಸಿದರು.ಸಮಾರಂಭದಲ್ಲಿ ವಿವಿಧ ತಂಡಗಳ ನಾಯಕರು, ಆಟಗಾರರು, ಕ್ರೀಡಾ ಪ್ರೇಮಿಗಳು ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಹಾಜರಿದ್ದರು.
ಟ್ರೋಫಿ ಅನಾವರಣ:
ಈ ಬಾರಿಯ KCL ಟೂರ್ನಮೆಂಟ್‍ನ ಟ್ರೋಫಿ ಅತ್ಯಂತ ವೈಭವಶಾಲಿಯಾಗಿದೆ. ಟ್ರೋಫಿಯನ್ನು ಅನಾವರಣಗೊಳಿಸಿದ ಕಾರ್ಯಕ್ರಮದ ಅತಿಥಿಗಳ ಪ್ರಕಾರ “ಟ್ರೋಫಿ ಎಷ್ಟು ಭವ್ಯವಾಗಿದೆ ಅಂದ್ರೆ ಪಂದ್ಯ ಆಡದೆ ಅದನ್ನು ಮನೆಗೆ ತೆಗುದುಕೊಂಡು ಹೋಗಬೇಕಾಣುಸುತ್ತಿದೆ” ಎಂದು ಹೇಳಿದರು
ಜೆರ್ಸಿ ಬಿಡುಗಡೆ:
KCLನಲ್ಲಿ ಭಾಗವಹಿಸಲಿರುವ ಎಲ್ಲಾ ತಂಡಗಳ ಜೆರ್ಸಿಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಆಟಗಾರರು ಹೊಸ ಜೆರ್ಸಿ ಧರಿಸಿ ಪ್ರದರ್ಶನ ಮಾಡಿದ್ದು, ತಂಡಗಳ ಹುರಿದುಂಬನೆಯನ್ನು ಹೆಚ್ಚಿಸಿತು. KCL ತಂಡಗಳ ಇಳಿವೇಶನದೊಂದಿಗೆ ಅಭಿಮಾನಿಗಳು ಹೊಸ ಜೆರ್ಸಿಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಮತ್ತು ಆಯೋಜನೆ ವಿವರಗಳು:
KCL ಟೂರ್ನಮೆಂಟ್‍ನ ಫೈನಲ್ ಪಂದ್ಯವು ೧೩ ಅಕ್ಟೋಬರ್ ೨೦೨೪ ರಂದು ಅಜ್ಮಾನ್ನ ಹೀಲಿಯೋನಲ್ಲಿ ನಡೆಯಲಿದ್ದು, ಜಯಶಾಲಿಗಳಿಗೆ ವೈಭವೀಕೃತ ಟ್ರೋಫಿಯೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಇದಲ್ಲದೆ, ಅತ್ಯುತ್ತಮ ಆಟಗಾರರಿಗೆ ಮತ್ತು ತಂಡಗಳಿಗೆ ವಿಶೇಷ ಪ್ರಶಸ್ತಿಗಳೂ ಇರಲಿವೆ ಎಂದು ಆಯೋಜಕರು ತಿಳಿಸಿದರು.
ಸಮಾರಂಭದ ಕೊನೆಗೆ ಎಲ್ಲ ತಂಡಗಳಿಗೂ ಶ್ರೇಷ್ಠತಾ ಕೋರಿಕೆ ಮತ್ತು ಶುಭಾಶಯಗಳನ್ನು ಹಾರೈಸಲಾಯಿತು. KCL ಟೂರ್ನಮೆಂಟ್‍ನ ಮೊದಲ ಪಂದ್ಯವು ೦೫ ಅಕ್ಟೋಬರ್ ೨೦೨೪ರಂದು ಆರಂಭಗೊಳ್ಳಲಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಕ್ರೀಡಾ ಹಬ್ಬವನ್ನು ಕಾತರದಿಂದ ಎದುರುನೋಡುತ್ತಿದ್ದಾರೆ.
ಈ ಟೂರ್ನಿಯೆಲ್ಲಿ ಭಾಗವಹಿಸಿವು ಎಲ್ಲ ತಂಡಗಳಿಗೆ KCL ಆಯೋಜಕ ಸಮಿತಿ ಸದ್ಯಸರಾದ ಸಾಗರ್ ಶೆಟ್ಟರ್, ಶಬರೀಶ್ ಸಕ್ಲೇಶಪುರ್ ರಮಾನಾಥ್, ಅಯ್ಯಪ್ಪ ಮುತ್ತಯ್ಯ, ಸಾಗರ್ ಮುದಕವಿ, ವಿನಾಯಕ್ ಉಪಾಧ್ಯ, ಅನಿಲ್ ಶಿವರಾಂ, ಆನಂದ್ ಪವಾರ್, ಫಯಾಜ್ ಅಹ್ಮದ್ ಸಯೇದ್, ಹರ್ಷ ಜಗದೀಶ್, ಅಕ್ಷಯ್ ಗೌಡ, ರಾಜೇಶ್ ಗರುಡಯ್ಯ, ಚೇತನ್ ಸುಬ್ರಮಣ್ಯ, ಧನುಷ್ ಜೀವನ್, ಭರತ್ ಪಾಟೀಲ್, ಶ್ರೇಯಸ್ ಮತ್ತು ಗಲ್ಫ್ ಗೆಳೆಯರು ಮತ್ತು ಗಲ್ಫ್ ಗೆಳತಿಯರ ತಂಡ ಧನ್ಯವಾದ ತಿಳಿಸಿದರು ಮತ್ತು ಶುಭ ಕೋರಿದರು

