ಬೆಂಗಳೂರು : ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಶುರುಮಾಡಿದ್ದ ಬಿಬಿಎಂಪಿ ಮಹತ್ವ ಯೋಜನೆ ‘ಮನೆ ಬಾಗಿಲಿಗೆ ಶಾಲೆ ಯೋಜನೆ’ ಮಸಣ ಸೇರಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಯೋಜನೆಗೆ ಆರಂಭಿಸಲಾಗಿದ್ದ ಈ ಯೋಜನೆ ಕೇವಲ 4 ವರ್ಷಕ್ಕೆ ಮೂಲೆ ಸೇರಿದೆ.ಹೈಕೋರ್ಟ್ ಕಠಿಣ ಸೂಚನೆ ಮೇರೆಗೆ ಆರಂಭವಾಗಿದ್ದ ಈ ಯೋಜನೆಯನ್ನು ಬಿಎಂಟಿಸಿಯಿಂದ ಹಳೆ ಬಸ್ ಖರೀದಿಸಿ ಸ್ಕೂಲ್ ಆನ್ ಬಸ್ ಆರಂಭಿಸಲಾಗಿತ್ತು.
ಬಿಎಂಟಿಸಿಯಿಂದ 2021ರ ಏಪ್ರಿಲ್ ನಲ್ಲಿ 10 ಬಸ್ ಖರೀದಿಸಿದ್ದ ಬಿಬಿಎಂಪಿ, ಆ ಬಸ್ ಗಳನ್ನ ಅಲ್ಟರ್ ಮಾಡಿ ಸ್ಕೂಲ್ ಆನ್ ಬಸ್ ವೀಲ್ ಎಂಬ ಯೋಜನೆ ಆರಂಭಿಸಿ ಕೊಳಗೇರಿ ಪ್ರದೇಶ, ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿತ್ತು.ಹೈಕೋರ್ಟ್ ಚಾಟಿ ಬೀಸಿದ ಮೇಲೆ ಪಾಲಿಕೆಯಿಂದ ಬಸ್ ಆನ್ ಸ್ಕೂಲ್ ವಿಲ್ಸ್ ಅನ್ನೋ ಯೋಜನೆ ಜಾರಿ ಮಾಡಲಾಗಿತ್ತು. ಒಂದು ಬಿಎಂಟಿಸಿ ಹಳೆ ಬಸ್ ಗೆ 10 ಲಕ್ಷ ರೂಪಾಯಿ ಕೊಟ್ಟಿದ್ದ ಪಾಲಿಕೆ, ನಾಲ್ಕೇ ವರ್ಷಕ್ಕೆ ಬಸ್ ಗಳನ್ನ ಬಿಎಂಟಿಸಿಗೆ ವಾಪಸ್ಸು ನೀಡಿದೆ.
ಲಕ್ಷಾಂತರ ರೂಪಾಯಿ ಕೊಟ್ಟು ರೆಡಿ ಮಾಡಿದ 10 ಬಸ್ಸುಗಳು ಸದ್ಯ ಬಿಎಂಟಿಸಿ ಗ್ಯಾರೆಂಜ್ ಸೇರಿದ್ದು ಇತ್ತ ಸ್ಕೂಲ್ ಆನ್ ಬಸ್ ವಿಲ್ಸ್ ಯೋಜನೆಯನ್ನ ಈ ವರ್ಷದಿಂದ ಕೈ ಬಿಡಲಾಗಿದೆ.ದಾಖಲಾತಿ ಪ್ರಮಾಣದ ಆಧಾರದ ಮೇಲೆ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಲು ಪಾಲಿಕೆ ಚಿಂತನೆ ನಡೆಸಿದ್ದು ಬಸ್ ಗಳ ಬದಲಿಗೆ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಾಲೆಗಳಿಗೆ ಕರೆತಂದು ನುರಿತ ಶಿಕ್ಷಕರಿಂದ ಭೋದನೆಗೆ ಪ್ಲ್ಯಾನ್ ಮಾಡಿದೆ. ಈ ಮೂಲಕ ಹೈಕೋರ್ಟ್ ಸುಮಟೋ ಕೇಸ್ ಅಡಿಯಲ್ಲಿ ದಾಖಲಾಗಿದ್ದ ಆದೇಶಕ್ಕೆ ಬಿಬಿಎಂಪಿ ತಿಲಾಂಜಲಿ ಹಾಡಿದೆ.

