ರಾಮನಗರ : ಕೆಲವೇ ದಿನಗಳಲ್ಲಿ ಬ್ರೋಕರ್ಗಳು ನಿಮ್ಮ ಮನೆಗೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತ್ತೆ ಮತ್ತೆ ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ. ನಿಮ್ಮ ಆಸ್ತಿಗೆ ಬಹಳ ಮೌಲ್ಯ ಬರಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.
ಹಂತಿಮ ಹಂತದಲ್ಲಿ ರಾಮನಗರ ಮರುನಾಮಕರಣ ಪ್ರಕ್ರಿಯೆಗಳು:
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಮರುನಾಮಕರಣ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಹಂತಿಮ ಹಂತಕ್ಕೆ ಬಂದಿವೆ. ಇನ್ನು ಒಂದು ಎನ್ಓಸಿ ಬರಬೇಕು, ಅದನ್ನ ದೆಹಲಿಯವರು ಮಾಡುತ್ತಾರೆ. ನಮ್ಮ ಜಿಲ್ಲೆಯ ಹೆಸರು ನಾವು ಬದಲಾವಣೆ ಮಾಡಿಕೊಳ್ಳುವುದಕ್ಕೆ ಮಾನದಂಡಗಳಿಲ್ಲ. ಪ್ರಧಾನಿಗಳಿಗೆ ಹಾಗೂ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಡಿನ್ನರ್ ಪಾಲಿಟಿಕ್ಸ್ ಇಲ್ಲ :
ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಚರ್ಚೆ ವಿಚಾರವಾಗಿ ಮಾತನಾಡಿದ್ದು, ನಮ್ಮಲ್ಲಿ ಯಾವುದೇ ಡಿನ್ನರ್ ಪಾಲಿಟಿಕ್ಸ್ ಇಲ್ಲ. ಹೊಸ ವರ್ಷ ಅಂತ ಅವರು ಊಟಕ್ಕೆ ಸೇರಿದ್ದರು. ನಾನು ವಿದೇಶಕ್ಕೆ ಹೋಗಿದ್ದೆ ಅಷ್ಟೇ. ಅದನ್ನ ನೀವು ವೈಭವೀಕರಣ ಮಾಡಿದ್ರಿ ಅಷ್ಟೇ ಎಂದಿದ್ದಾರೆ.
ಕುಮಾರಸ್ವಾಮಿಗೆ ಕೌಂಟರ್ :
ನಾನು ಶಾಲೆಗೆ 110 ಎಕರೆ ಜಮೀನು ಬರೆದುಕೊಟ್ಟಿದ್ದೇನೆ. ಹೆಚ್ಡಿ ಕುಮಾರಸ್ವಾಮಿ ಅಥವಾ ಮಂಜುನಾಥ್ 1 ಸೈಟ್ನಾದರೂ ಕೊಟ್ಟಿದ್ದಾರಾ? ನನ್ನನ್ನು ಶಾಸಕ, ಉಪ ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ಬೇರೆಯವರಿಗೆ ಮತ ಹಾಕಿದ್ದವರೂ ಯೋಚನೆ ಮಾಡಬೇಕು. ಸ್ಕೂಟರ್ ತಗೊಂಡು ಮದ್ದೂರು, ಮಳವಳ್ಳಿಗೆ ಹೋಗಿ ನೋಡಿ ಚನ್ನಪಟ್ಟಣಕ್ಕೆ ಹೋದರೆ ಮೂಗು ಹಿಡಿದುಕೊಂಡು ಹೋಗಬೇಕಿತ್ತು. ನನಗೆ ನಾಚಿಕೆ ಆಯ್ತು, ನಾನೇ 200-300 ಕೋಟಿ ರೂ ಹಣ ಕೊಟ್ಟೆ. ಬಹಳಷ್ಟು ಜನ ಡಿಕೆ ಬ್ರದರ್ಸ್ ಜೊತೆ ಹೋಗೋಣ ಅಂತ ಬಂದ್ರು. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲ್ಲಿಸಿ ಗೌರವ ಉಳಿಸಿದ್ದರು. 25,000 ಮತಗಳ ಅಂತರದಿಂದ ಗೆಲ್ಲಿಸಿ ನಮ್ಮ ಗೌರವ ಉಳಿಸಿದರು ಎಂದಿದ್ದಾರೆ.

