ಬೆಳಗಾವಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತಾಲೂಕಿನ ಅಲ್ಲದಗಾ ಭಾಗದಲ್ಲಿ ಬೆಳೆದಿದ್ದ ಗೆಣಸು ಬೆಳೆ ನೀರಿನಲ್ಲೇ ಕೊಳೆತು ಜಲಾವೃತವಾಗಿದೆ. ಹೌದು ಅಲ್ಲದಗಾ ಭಾಗದಲ್ಲಿ ಅತಿಹೆಚ್ಚು ಗೆಣಸು ಬೆಳೆದಿರುವ ರೈತ ಶೆಟ್ಟಿ ವಿಟ್ಟಲ್ ರಾಚಯ್ಯ ಅವರು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ.
ವಿಪರೀತವಾಗಿ ಮಳೆ ಸುರಿಯುತ್ತಿರುವುದರಿಂದ ಬಳ್ಳಾರಿ ನಾಲಾ ನೀರು ರೈತರ ಜಮೀನಿಗೆ ನುಗ್ಗಿ ರೈತರು ಬೆಳೆದಿರುವ ಗೆಣಸು, ತರಕಾರಿ ಬೆಳೆಗಳನ್ನು ನಾಶ ಮಾಡಿದೆ. ಕಟಾವಿಗೆ ಬಂದ ಗೆಣಸು ಸಂಪೂರ್ಣವಾಗಿ ಜಲಾವೃತವಾಗಿದ್ದು, ಜಲಾವೃತಗೊಂಡ ಜಮೀನಿನಲ್ಲಿ ನೀರಲ್ಲೇ ನಿಂತು ಗೆಣಸು ಕಟಾವು ಮಾಡಲು ರೈತರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇನ್ನು ಬೆಳೆಗಳು ಹಾನಿ ಆಗುವ ಭೀತಿಯಲ್ಲಿ ರೈತರಿದ್ದು ಹೊಟ್ಟೆಪಾಡಿಗಾಗಿ ತಾವು ಬೆಳೆದ ಬೆಳೆಯನ್ನು ಮಳೆ ಅಂತಾನೂ ಲೆಕ್ಕಿಸದೆ ಕಟಾವು ಮಾಡುತ್ತಿದ್ದಾರೆ.
ವರದಿ. ದಯಾನಂದ. ಎಂ.

