ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಇತ್ತೀಚೆಗೆ ಕುಸಿತ ಕಂಡಿದ್ದು, ಇದರ ಪರಿಣಾಮವಾಗಿ ಅದರ ಉಪ ಉತ್ಪನ್ನವಾದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ದರಗಳೂ ಇಳಿಕೆಯಾಗಿವೆ. ಇದರ ಭಾಗವಾಗಿ, ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಮತ್ತೊಂದು ತಿದ್ದುಪಡಿ ಮಾಡಿ ಸ್ವಲ್ಪ ಕಡಿತ ಘೋಷಿಸಿದ್ದವೆ.
19 ಕೆಜಿ ವಾಣಿಜ್ಯ LPG ಸಿಲಿಂಡರ್ ಮೇಲಿನ ಬೆಲೆ ₹10 ರಷ್ಟು ಕಡಿಮೆ ಮಾಡಲಾಗಿದ್ದು, ಹೊಸ ದರಗಳು ಡಿಸೆಂಬರ್ 1, 2025 ರಿಂದ ಜಾರಿಯಲ್ಲಿವೆ. ಕಳೆದ ತಿಂಗಳು ನವೆಂಬರ್‌ನಲ್ಲಿ ಕೂಡ ಕಂಪನಿಗಳು ₹5 ರಷ್ಟು ಬೆಲೆ ಕಡಿತ ಮಾಡಿದ್ದವು.
ಪ್ರತಿ ತಿಂಗಳ ಮೊದಲ ದಿನ, ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು LPG ದರಗಳನ್ನು ಮರುಪರಿಶೀಲನೆ ಮಾಡುತ್ತವೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ದರ ಇಳಿಕೆ ಕಂಡಿದ್ದರೂ, ಈ ವರ್ಷದ ಅಕ್ಟೋಬರ್‌ನಲ್ಲಿ ಮಾತ್ರ ₹15.50 ರಷ್ಟು ದರ ಏರಿಕೆ ಮಾಡಲಾಗಿತ್ತು. ಅಕ್ಟೋಬರ್‌ಗೆ ಮುನ್ನ ನಿರಂತರವಾಗಿ LPG ದರಗಳು ಇಳಿಕೆಯಾಗುತ್ತ ಬಂದಿರುವುದು ಗಮನಾರ್ಹ.
ಗ್ರಾಹಕರಿಗೆ ಸ್ವಲ್ಪ ತಗ್ಗು ನೀಡಿರುವ ಈ ದರ ಪರಿಷ್ಕರಣೆ, ಮುಂದಿನ ತಿಂಗಳುಗಳಲ್ಲೂ ಮುಂದುವರೆಯುವ ಸಾಧ್ಯತೆಗಳಿವೆ ಎಂದು ತೈಲ ವಲಯ ಮೂಲಗಳು ಸೂಚಿಸುತ್ತಿವೆ.

