ಬಿಜೆಪಿ ಸರ್ಕಾರ ಕಾಲದಲ್ಲಿ ನಡೆದಿತ್ತು ಎಂದು ಆರೋಪಿಸಲಾಗಿದ್ದ ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ ಪ್ರಕರಣದಲ್ಲಿ ದೊಡ್ಡ ತಿರುವು ಕಂಡುಬಂದಿದೆ. ಸಚಿವ ಕೆ.ಜೆ. ಜಾರ್ಜ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಬಿಜೆಪಿ ಮುಖಂಡರು ದಾಖಲಿಸಿದ್ದ ದೂರು ನ್ಯಾಯಾಂಗ ಪರಿಶೀಲನೆಯ ಬಳಿಕ ತತ್ವಾಧಾರ ಇರಲಿಲ್ಲವೆಂದು ನ್ಯಾ. ಎಂ.ಐ. ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ. ಈ ಮೂಲಕ ಜಾರ್ಜ್ ವಿರುದ್ಧದ ಕೇಸ್ ಮಾತ್ರವಲ್ಲ, ಅಧಿಕಾರಿಗಳಾದ ಗೌರವ್ ಗುಪ್ತಾ, ಮಹಾಂತೇಶ ಬೀಳಗಿ ಹಾಗೂ ಹೆಚ್.ಜೆ. ರಮೇಶ್ ಅವರ ವಿರುದ್ಧವೂ ನಡೆದಿದ್ದ ಪ್ರಕರಣಗಳನ್ನು ರದ್ದುಪಡಿಸಲಾಗಿದೆ.
ಹೀಗಾಗಿ ಸ್ಮಾರ್ಟ್ ಮೀಟರ್ ಹಗರಣ ಆರೋಪದ ವಿಚಾರದಲ್ಲಿ ಸಚಿವ ಜಾರ್ಜ್ ಸೇರಿದಂತೆ ಅಧಿಕಾರಿಗಳಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ.

