ನಮ್ಮಲ್ಲಿ ಹಬ್ಬಗಳು ಬಂದರೆ ಸಾಕು ಅನೇಕರು ತಮ್ಮ ಫಿಟ್ನೆಸ್ ಗುರಿಗಳನ್ನು ಗಾಳಿಗೆ ತೂರಿ, ಮನೆಯಲ್ಲಿ ಮಾಡಿದಂತಹ ಎಲ್ಲಾ ಅಡುಗೆಯನ್ನು ಬಿಟ್ಟು ಪ್ರಮುಖ ಭಕ್ಷ್ಯಗಳವರೆಗೆ ಎಲ್ಲವನ್ನೂ ಸೇವಿಸುತ್ತಾರೆ (Eating) ಅನೇಕರು. ಎಷ್ಟೋ ಜನರು ಹಬ್ಬದ ದಿನ ಮಾಡಿದ ಅಡುಗೆಗಳನ್ನು ಹೊಟ್ಟೆ ತುಂಬಾ ತಿಂದು, ಆನಂತರ ‘ಅಮ್ಮಾ ಹೊಟ್ಟೆ ತುಂಬಿತು, ಜೀರ್ಣ ಆಗ್ತಾ ಇಲ್ಲ’ ಅಂತೆಲ್ಲಾ ಸಮಸ್ಯೆಗಳನ್ನು (Problems) ನಾವು ಕೇಳಿರುತ್ತೇವೆ. ಈ ನಿಟ್ಟಿನಲ್ಲಿ, ಹೈದರಾಬಾದ್‌ನ ಎಲ್‌ಬಿ ನಗರದ ಕಾಮಿನೇನಿ ಆಸ್ಪತ್ರೆಯ ಹಿರಿಯ ಜನರಲ್ ವೈದ್ಯ ಡಾ. ಹರಿ ಕಿಶನ್ ಅವರು “ಹಬ್ಬದ ಸಮಯದಲ್ಲಿ ಆಹಾರವನ್ನು ಸಂಪೂರ್ಣವಾಗಿ ಆನಂದಿಸಲು, ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಆದ್ಯತೆ ನೀಡುವುದು ಮುಖ್ಯ. ಒಂದು ಉಪಯುಕ್ತ ಸಲಹೆ (Good Tips) ಎಂದರೆ ಸಾಕಷ್ಟು ನೀರು ಕುಡಿದು ಹೈಡ್ರೇಟೆ (Hydrate) ಆಗಿರುವುದು ಅಂತ ಹೇಳಬಹುದು.
ಹಬ್ಬದ ಕೂಟಗಳಲ್ಲಿ ಹೇರಳವಾಗಿರುವ ಮತ್ತು ಹೆಚ್ಚಾಗಿ ಉಪ್ಪುಸಹಿತ ಆಹಾರಗಳೊಂದಿಗೆ, ನಿರ್ಜಲೀಕರಣಗೊಳ್ಳುವುದು ಸುಲಭ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಲು ಮರೆಯದಿರಿ” ಎಂದು ಹೇಳುತ್ತಾರೆ.
ಜೀರ್ಣಕಾರಿ ಆರೋಗ್ಯಕ್ಕಾಗಿ ಆಯುರ್ವೇದ ಪರಿಹಾರಗಳು ಹೀಗಿವೆ..
ಕಪಿವಾದಲ್ಲಿ ಆರ್ ಆಂಡ್ ಡಿ ಮುಖ್ಯಸ್ಥರಾಗಿರುವ ಡಾ. ಕೃತಿ ಸೋನಿ ಅವರು “ಜೀರ್ಣಕ್ರಿಯೆಯನ್ನು ಆರೋಗ್ಯವಾಗಿರಿಸಿಕೊಳ್ಳಲು ಒಳ್ಳೆಯ ಆಹಾರ ಪದ್ಧತಿ, ಸಮಯೋಚಿತ ಊಟ ಮತ್ತು ಅತಿಯಾದ ಸೇವನೆಯಿಂದ ದೂರವಿರುವುದು ಮುಖ್ಯವಾಗುತ್ತದೆ. ಈ ಆಹಾರದ ತತ್ವಗಳಿಗೆ ಪೂರಕವಾಗಿ ಜೀವನಶೈಲಿ ಅಭ್ಯಾಸಗಳು, ಉದಾಹರಣೆಗೆ ಊಟದ ನಂತರ ವಾಕ್ ಹೋಗುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ” ಎಂದು ಹೇಳುತ್ತಾರೆ.
ಕೆಲವು ಗಿಡಮೂಲಿಕೆ ಪರಿಹಾರಗಳು ಇಲ್ಲಿವೆ ನೋಡಿ
ತ್ರಿಫಲ
ಅಮಲಕಿ, ಬಿಭಿಟಕಿ ಮತ್ತು ಹರಿತಕಿ ಎಂಬ ತ್ರಿಫಲಾ ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಸೌಮ್ಯ ವಿರೇಚಕವಾಗಿ ಕೆಲಸ ಮಾಡುತ್ತದೆ. 1/2 ಟೀ ಚಮಚ ತ್ರಿಫಲ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮಲಗುವ ಮುನ್ನ ಸೇವಿಸಬೇಕು.
ಶುಂಠಿ
ಶುಂಠಿ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ವಾಕರಿಕೆ ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ತಾಜಾ ಶುಂಠಿ ಚೂರುಗಳನ್ನು ಊಟಕ್ಕೆ ಮೊದಲು ಅಗಿಯಬಹುದು ಅಥವಾ ಶುಂಠಿ ಪುಡಿಯನ್ನು ಚಹಾದಲ್ಲಿ ಸೇರಿಸಿಕೊಂಡು ಸೇವಿಸಬಹುದು.
ಜೀರಿಗೆ
ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಜೀರಿಗೆಯನ್ನು ನೀರಿನಲ್ಲಿ ಹಾಕಿಕೊಂಡು ಕುದಿಸಿ ಜೀರಿಗೆ ಚಹಾವನ್ನು ತಯಾರಿಸಬಹುದು.
ಇದನ್ನೂ ಓದಿ:
ನೀವು ನಿಮ್ಮ ಗುರಿಯನ್ನು ತಲುಪಬೇಕೆಂದರೆ, ಈ ಅಭ್ಯಾಸಗಳಿಗೆ ಹೇಳಿ ಗುಡ್ ಬಾಯ್
ಸೋಂಪು
ಹೊಟ್ಟೆಯಲ್ಲಿ ಗ್ಯಾಸ್ ಆಗುವುದು, ಹೊಟ್ಟೆ ಸೆಳೆತ ಮತ್ತು ಉಬ್ಬುವುದು ಚಿಕಿತ್ಸೆಯಲ್ಲಿ ಸಹಾಯಕವಾಗಿದೆ. ಫೆನ್ನೆಲ್ ಬೀಜಗಳನ್ನು ಊಟದ ನಂತರ ಅಗಿಯಬಹುದು ಅಥವಾ ಇದರಿಂದ ಚಹಾವನ್ನು ಸಹ ತಯಾರಿಸಿಕೊಳ್ಳಬಹುದು.
ಪುದೀನಾ
ಪುದೀನಾ ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ ಮತ್ತು ಅಜೀರ್ಣವನ್ನು ನಿವಾರಿಸಲು ಸಹ ಇದು ಸಹಾಯ ಮಾಡುತ್ತದೆ. ಪುದೀನಾ ಚಹಾವನ್ನು ಊಟದ ನಂತರ ಸೇವಿಸಬಹುದು.
ಕೊತ್ತಂಬರಿ
ಅಜೀರ್ಣ ಮತ್ತು ಹೊಟ್ಟೆಯ ತೊಂದರೆಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಕೊತ್ತಂಬರಿ ಬೀಜಗಳನ್ನು ಬಳಸಿಕೊಂಡು ಚಹಾ ಮಾಡಿಕೊಂಡು ಕುಡಿಯಬಹುದು ಅಥವಾ ಊಟದಲ್ಲಿ ಮಸಾಲೆಯಾಗಿ ಸಹ ಬಳಸಬಹುದು.
ಲೈಕೋರೈಸ್
ಇದು ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ಲೈಕೋರೈಸ್ ರೂಟ್ ಅನ್ನು ಅಗಿಯಬಹುದು ಅಥವಾ ಇದರಿಂದ ಚಹಾ ಸಹ ಮಾಡಿಕೊಂಡು ಕುಡಿಯಬಹುದು.
ಸೀರೆಯಲ್ಲಿ ಚಂದನದ ಗೊಂಬೆಯಂತೆ ಕಂಡ ಪ್ರಿಯಾಂಕಾ!
ಇನ್ನೂ ಹಬ್ಬದ ನಂತರ ಮತ್ತೆ ಫಿಟ್ನೆಸ್ ಕಾಪಾಡಿಕೊಳ್ಳಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಹೈಡ್ರೇಟ್ ಆಗಿರುವುದು, ವ್ಯಾಯಾಮ ಮಾಡುವುದು ಮತ್ತು ಒಳ್ಳೆಯ ನಿದ್ರೆ ಮಾಡುವುದು ಸೂಕ್ತ ಅಂತಾರೆ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

