ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್‌ನ 19ನೇ ಫ್ಲೋರ್‌ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣಾದಾದ ವ್ಯಕ್ತಿಯ ಗುರುತು ಪ್ತೆಯಾಗಿದ್ದು, ನಗರದ ರೇಸ್ ಕೋರ್ಸ್ ರಸ್ತೆಯ ರಿನಯಸಾನ್ಸ್ ಹೋಟೆಲ್‌ನಲ್ಲಿ ಈ ದುರಂತ ನಡೆದಿದೆ.
ತಮಿಳುನಾಡು ಮೂಲದ ಶರಣ್(28) ಎಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಗುರುತಿಸಲಾಗಿದೆ. ಈ ಹಿಂದೆಯೂ ಸಾಕಷ್ಟು ಬಾರಿ ಇದೆ ಹೋಟೆಗೆ ಭೇಟಿ ನೀಡಿದ್ದ. ಇದನ್ನೂ ಓದಿ:ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿದ ಹೆತ್ತ ತಂದೆ
ಶರಣ್ ಅವರು ಕಳೆದ ಶನಿವಾರ ಬ್ಯುಸಿ9ನೆಸ್ ಉದ್ದೇಶದಿಂದ ಹೋಟೆಲ್ ಗೆ ಬಂದು ಚೆಕ್ ಇನ್ ಆಗಿದ. ಇಂದು ಮಧ್ಯಹ್ನ ಸುಮಾರು 2:15 ಕ್ಕೆ ಎ19 ನೆ ಫ್ಲೋರ್‌ನಿಂದ ಶರಣ್ ಅವರು ಹಾರಿ ಕೆಳಗೆ ಹಾರಿ ಬಿದಿದ್ದಾರೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆ.ಕವಿತಾ ಬಂಧನ – ಜಾಮೀನು ನೀಡಲು ನಿರಾಕರಿಸಿದ ಕೋರ್ಟ್
ಹೋಟೆಲ್ ಮೆಲಿಂದ ಜಿಗಿಯುವುದಕ್ಕೊ ಮುನ್ನ ಶರಣ್ ಅವರು ಸುಮಾರು 20 ನೀಮಿಷಗಳಿಂದಲೂ ಬಾಲ್ಕನಿಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಈತನನ್ನು ನೋಡಿದ ಜನರು ತಕ್ಷಣವೇ ಹೋಟೆಲ್‌ನ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಸಿಬ್ಬಂದಿ ಅಲ;ಲಿಗೆ ತೆರಳವಷ್ಟರಲ್ಲಿ ಶರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಸಾಕ್ಷಿಗೆ ಸಂಗ್ರಹಿಸಿದ್ದ 10 ಕೆಜಿ ಗಂಜಾ, 9 ಕೆಜಿ ಭಾಂಗ್ ತಿಂದ ಇಲ್ಲಿಗಳು

