ಕೋಲಾರ: ಚುನಾವಣೆಯ ಫಲಿತಾಂಶಕ್ಕೆ ಬರೋಬ್ಬರಿ ಒಂದುವರೆ ತಿಂಗಳು ಕಾಯಬೇಕಾದ ಪರಿಸ್ಥಿತಿ ಇರುವ ಕಾರಣ ಕುತೂಹಲ ದುಪ್ಪಟ್ಟಾಗುತ್ತಿದ್ದು, ಇದೀಗ ಚಿನ್ನದನಾಡಲ್ಲಿ ಬೆಟ್ಟಿಂಗ್ ಆಗಿ ಪರಿವರ್ತನೆಯಾಗುತ್ತಿದೆ.
ಚುನಾವಣೆ ಮುಗಿದು ಆರು ದಿನ ಕಳೆದಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು (Mallesh Babu) ಗೆಲ್ತಾರಾ ಅಥವಾ ಕಾಂಗ್ರೆಸ್ (Congress) ಅಭ್ಯರ್ಥಿ ಕೆ.ವಿ.ಗೌತಮ್ (Gowtham) ಗೆಲ್ಲುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಈ ಹಿನ್ನಲೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಚುನಾವಣೆಯಲ್ಲಿ ತಮ್ಮ ತಮ್ಮ ಅಭ್ಯರ್ಥಿ ಪರವಾಗಿ ಬೆಟ್ಟಿಂಗ್ ಆಡೋದಕ್ಕೆ ಶುರುಮಾಡಿದ್ದಾರೆ ಎನ್ನಲಾಗುತ್ತಿದೆ.
ಬಾಜಿಯಲ್ಲಿವೆ ಕುರಿ, ಕೋಳಿ, ಜಮೀನು
ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನೇರಾನೇರ ಬೆಟ್ಟಿಂಗ್ ನಡೆಯುತ್ತದೆ. ಒಂದು ಗ್ರಾಮದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕನ ಪರವಾಗಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದು, ಈ ಬೆಟ್ಟಿಂಗ್‌ನಲ್ಲಿ ಕೇವಲ ಹಣವಷ್ಟೇ ಅಲ್ಲ, ಬೈಕ್, ಕಾರು, ಕುರಿ, ಕೋಳಿ, ಮೇಕೆ, ಹಸು, ಜೊತೆಗೆ ಬೆಲೆಬಾಳುವ ಭೂಮಿಯನ್ನು ಕೂಡ ಪಣಕ್ಕಿಡಲಾಗಿದೆಯಂತೆ. ಇದನ್ನೂ ಓದಿ: ನೇಹಾ ಹಿರೇಮಠ ಮತ್ತು ಪ್ರಜ್ವಲ್ ಪ್ರಕರಣಗಳು ಭಿನ್ನ, ಎರಡರಲ್ಲಿ ಸಾಮ್ಯತೆ ಇಲ್ಲ: ಮಾಳವಿಕಾ ಅವಿನಾಶ್
ಕೇವಲ ಚುನಾವಣೆ ಸಂಬಂಧವೇ ಜಿಲ್ಲೆಯಾಧ್ಯಂತ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ಗುಪ್ತ ಗುಪ್ತಾಗಿ ನಡೆಯುತ್ತಿದೆ ಎನ್ನಲಾಗಿದೆ. ಚುಣಾವಣೆಗೆ ಮುನ್ನವೇ ಅಭ್ಯರ್ಥಿಗಳ ಪರವಾದ ಟ್ರೆಂಡ್ ನೋಡಿ ಬೆಟ್ಟಿಂಗ್ ಕಟ್ಟಲಾಗಿತ್ತಂತೆ. ಆದರೆ, ಈಗ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಯಾರು ಗೆಲ್ಲಬಹುದು ಎನ್ನುವ ಒಂದು ಲೆಕ್ಕಾಚಾರ ಸಿಕ್ಕಿದೆ. ಹಾಗಾಗಿ ಬೆಟ್ಟಿಂಗ್? ಕಟ್ಟುವವರ ಸಂಖ್ಯೆ ದುಪ್ಪಾಟ್ಟಾಗಿದೆ. ಇದು ಗುಟ್ಟು ಗುಟ್ಟಾಗಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ನಡೆಯುವ ಬೆಟ್ಟಿಂಗ್ ಆಗಿದೆ. ಇದನ್ನೂ ಓದಿ: ಬಿರು ಬಿಸಿಲ ಎಫೆಕ್ಟ್; ತತ್ತರಿಸಿದ ಬೇಸಿಗೆ ಹಂಗಾಮಿನ ಬೆಳೆ
ನಗರ ಪ್ರದೇಶದಲ್ಲಿ ಹಣ ವಾಹನ, ಚಿನ್ನ ಬೆಳ್ಳಿ, ಮೊಬೈಲ್ ಈ ರೀತಿ ಬೆಟ್ಟಿಂಗ್ ನಡೆಯುತ್ತಿದ್ರೆ, ಗ್ರಾಮೀಣ ಭಾಗಗಳಲ್ಲಂತೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕುರಿ, ಕೋಳಿ, ಹಸು, ಎಮ್ಮೆ ಇಲ್ಲಾ ಹಣವನ್ನು ಅಡವಿಟ್ಟು ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗುತ್ತಿದೆ. ಇನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಈ ಬೆಟ್ಟಿಂಗ್ ನಿಯಂತ್ರಣ ಮಾಡೋದು ಕಷ್ಟದ ಕೆಲಸವಾಗಿದೆ. ಹೌದು, ಬೆಟ್ಟಿಂಗ್ ಆಡುವವರು ತಾವು ವೈಯಕ್ತಿಕವಾಗಿ ಬೆಟ್ಟಿಂಗ್ ಕಟ್ಟಿಕೊಂಡಿರುತ್ತಾರೆ, ಹಾಗಾಗಿ ಯಾವುದೇ ಸಾಕ್ಷಿ, ಪುರಾವೆ ಸಿಗೋದಿಲ್ಲ ಎನ್ನಲಾಗುತ್ತಿದೆ. ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಾರ್ವಜನಿಕರ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಸಿಲಿನ ಬೇಗೆಗೆ ತಂಪು ಪಾನೀಯಗಳತ್ತ ಮುಖ ಮಾಡಿದ ಬೆಂಗಳೂರು ಮಂದಿ; ಜ್ಯೂಸ್, ಏಳನೀರಿನ ಬೆಲೆ ದಿನೇ ದಿನೇ ಏರಿಕೆ
.