ಬೆಳಗಾವಿ: ನೇಹಾ ಹಿರೇಮಠ (Neha Hiremath) ಮತ್ತು ಪ್ರಜ್ವಲ್ (Prajwal Revanna) ಪ್ರಕರಣಗಳು ಭಿನ್ನ, ಎರಡರಲ್ಲಿ ಸಾಮ್ಯತೆ ಇಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ನಟಿ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಳವಿಕಾ ಅವಿನಾಶ್ (Malvika Avinash) ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಅವರು ಪ್ರಜ್ವಲ್ ರೇವಣ್ಣ ಜೂನ್ 4 ರವರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಸದರಾಗಿರುತ್ತಾರೆ ಮತ್ತು ಒಂದು ಪಕ್ಷ ಗೆದ್ದರೆ ಎನ್‌ಡಿಎ ಒಕ್ಕೂಟದ ಸಂಸದರಾಗುತ್ತಾರೆ ಎಂದರು. ಪ್ರಜ್ವಲ್ ಜೆಡಿಎಸ್ ಪಕ್ಷದವಾರಾಗಿರುವುದರಿಂದ ಆ ಪಕ್ಷದ ನಾಯಕತ್ವ ಅವರನ್ನು 6 ವರ್ಷಗಳಲ ಅವಧಿಗೆ ಉಚ್ಛಾಟನೆ ಮಾಡಿದೆ ಮತ್ತು ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿರುವುದರಿಂದ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ ಎಂದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣನ ರಾಸಲೀಲೆಗಳು..ಎಐಟಿ ರಚನೆ..ವಿದೇಶಕ್ಕೆ ಹಾರಿದ್ಯಾಕೆ ಸಂಸದ..!?
ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ್ದ ಮಾಳವಿಕಾ ಈ ಪ್ರಕರಣದಲ್ಲಿ ಯಾಕೆ ಸಂತ್ರಸ್ತೆಯರ ಪರ ಧ್ವನಿ ಎತ್ತುತ್ತಿಲ್ಲ, ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೇಹಾ ಕಾಲೇಜು ಆವರಣದಲ್ಲಿ ಬರ್ಬರವಾಗಿ ಹತ್ಯೆಯಾದಳು, ಆ ಪ್ರಕರಣವೇ ಬೇರೆ. ಆದರೆ ರಾಜ್ಯ ಸರ್ಕಾರ ಒಂದು ಸಮುದಾಯದ ಬಗ್ಗೆ ಮೃದು ಧೋರಣೆ ತಳೆದಿರುವುದನ್ನು ಬಿಜೆಪಿ ಖಂಡಿಸುತ್ತದೆ, ಬಾಂಬ್ ಸ್ಪೋಟ ಆದಾಗ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಘೋಷಣೆ ಕೂಗಿದರೂ ಸರ್ಕಾರ ಹೇಗೆ ಪ್ರತಿಕ್ರಿಯಿಸಿತು ಅಂತ ಗೊತ್ತಿದೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣ ದುರದೃಷ್ಟಕರ ಮತ್ತು ವಿಡಿಯೋಗಳ ಮೂಲಕ ಹೆಣ್ಣುಮಕ್ಕಳ ಮಾನ ಬೀದಿಗೆ ಬಂದಿರುವುದನ್ನು ತಾವು ಖಂಡಿಸುತ್ತೇವೆ ಎಂದು ಮಾಳವಿಕಾ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಹೆಚ್‌ಡಿಕೆ, ಹಾಸನ ಜಿಲ್ಲಾ ನಾಯಕರ ಕೈವಾಡ: ಕೈ ಸಂಸದ ಸುರೇಶ ಕಿಡಿ

