ಬೆಂಗಳೂರು: ಈ ಬಾರಿ ಎಂದಿಗಿಂತ ಹೆಚ್ಚು ಬಿಸಿಲಿನ (Summer) ತಾಪಮಾನ ದಾಖಲಾಗಿದ್ದು, ರಾಜ್ಯಾದ್ಯಂತ ಮಳೆ ಅಭಾವದಿಂದ ಕಡಿಮೆ ಬಿತ್ತನೆ ಜೊತೆಗೆ ಬೆಳೆ ನಷ್ಟವಾಗಿದೆ. ಯಾವ ಯಾವ ಬೆಳೆಯ ಬಿತ್ತನೆ ಪ್ರಮಾಣ ಹಾಗೂ ಬೆಳೆ ಪ್ರಮಾಣ ಕಡಿಮೆಯಾಗಿದೆ.
೨೦೨೩-೨೪ ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆ ಹಾಗೂ ಬಿತ್ತನೆ ಪ್ರಮಾಣದ ಡೀಟೈಲ್ಸ್ ಇಲ್ಲಿದೆ,
ಕಳೆದ ವರ್ಷದ ಅರ್ಧದಷ್ಟು ಫಸಲು ಪ್ರಮಾಣ ದಾಖಲಾಗಿದೆ. ಒಟ್ಟು ವಿಸ್ತೀರ್ಣದ ಗುರಿ ೬.೫೪ ಲಕ್ಷ ಹೆಕ್ಟೇರ್. ಆದರೆ ಬಿತ್ತನೆಯಾಗಿರೋದು ಕೇವಲ ೨.೨೩ ಲಕ್ಷ ಹೆಕ್ಟೇರ್ ಅಷ್ಟೆ. ಶೇಕಡಾವಾರು ಸಾಧನೆ ಕೇವಲ ೩೪%. ಕಳೆದ ವರ್ಷ ಇದೇ ಸಮಯಕ್ಕೆ ೫.೨೧ ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿತ್ತು. ೪.೬೯ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಈ ಬಾರಿ ಬಿರುಬಿಸಿಲಿಗೆ ಕುಂಠಿತಗೊಂಡ ಬೇಸಿಗೆ ಹಂಗಾಮಿನ ಬೆಳೆಗಳು. ಇದನ್ನೂ ಓದಿ: ಬಿಸಿಲಿನ ಬೇಗೆಗೆ ತಂಪು ಪಾನೀಯಗಳತ್ತ ಮುಖ ಮಾಡಿದ ಬೆಂಗಳೂರು ಮಂದಿ; ಜ್ಯೂಸ್, ಏಳನೀರಿನ ಬೆಲೆ ದಿನೇ ದಿನೇ ಏರಿಕೆ

