ಬೆಂಗಳೂರು: ಸ್ಯಾಂಡಲ್‌ವುಡ್ ನಟ, ಲೀಲಾವತಿ ಪುತ್ರ ವಿನೋದ್ ರಾಜ್ (Vinod Raj) ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ನೆಲಮಂಗಲದ ಮ್ಯಾಗ್ನಸ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಾರು 11 ವರ್ಷಗಳ ಹಿಂದೆ ಸ್ಟಂಟ್ ಅಳವಡಿಸಲಾಗಿತ್ತು. ಅದೇ ಕಾರಣದಿಂದ ನೋವು ಶುರುವಾಗಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರ ಸೂಚನೆ ಮೆರೆಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಸದ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಜೊತೆ ವಿಶ್ರಾಂತಿ ಪಡೆಯುತ್ತಿರೋ ವಿನೋದ್ ರಾಜ್
ತಾಯಿ ಲೀಲಾವತಿ ಕೊನೆ ಕ್ಷಣಗಳಲ್ಲಿ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆ ಹಾಗೂ ವೈದ್ಯರಿಂದಲೇ ವಿನೋದ್ ರಾಜ್ ಕೂಡ ಚಿಕಿತ್ಸೆ ಮಾಡಲಿದ್ದಾರೆ.

ವಿನೋದ್ ರಾಜ್ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸದ್ದು, ಹಲವಾರು ರೀತಿಯ ಸ್ಟಂಟ್‌ಗಳು ಮತ್ತು ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಇತ್ತಿಚೆಗೆ ಅವರ ತಾಯಿ ಕನ್ನಡದ ಹೆಸರಾಂತ ನಟಿ ಲೀಲಾವತಿ ಅವರು ಮರಣ ಹೊಂದಿದ್ದರು.