ಚಂಡೀಗಢ : ಚಂಡೀಗಢ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಂಬಾನಿ -ಅದಾನಿ ಅಸ್ತ್ರ ಹೂಡಿರುವ ರಾಹುಲ್ ಗಾಂಧಿ ಅಂಬಾನಿ ಉದಾಹರಣೆ ನೋಡಿ ಪ್ರಧಾನಿ ಮೋದಿ ಆಡಳಿತವನ್ನು ಟೀಕಿಸಿದ್ದಾರೆ.
ಹರಿಯಾಣ ಚುನಾವಣೆ 2024ಕ್ಕೆ ಮುನ್ನ ಬಹದ್ದೂರ್‌ಗಢದಲ್ಲಿ ರೋಡ್‌ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಮಂಗಳವಾರ ಮಾತನಾಡಿದ ರಾಹುಲ್ ಗಾಂಧಿ, ನೀವು ಎಂದಾದರೂ ಅಂಬಾನಿ ಮದುವೆಯನ್ನು ನೋಡಿದ್ದೀರಾ?, ಅಂಬಾನಿ ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ. ಇದು ಯಾರ ಹಣ, ಇದು ನಿಮ್ಮ ಹಣ, ನಿಮ್ಮ ಮಕ್ಕಳ ಮದುವೆಗೆ ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳುತ್ತೀರಿ. ಇದನ್ನು ಪ್ರಧಾನಿ ಮೋದಿ ಸೃಷ್ಟಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ. ಆದರೆ ರೈತರು ಸಾಲದ ಸುಳಿಯಲ್ಲಿ ಮುಳುಗಿದ ನಂತರವೇ ಮದುವೆಯಾಗಬಹುದು.
ರೈತರ ಮಕ್ಕಳು ಸಾಲದ ಸುಳಿಯಲ್ಲಿ ಮದುವೆಯಾಗುವ ಸ್ಥಿತಿ ಇದ್ದರೆ, ಆಯ್ಕೆಯಾದ 25 ಮಂದಿಯ ಮದುವೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬಹುದು. ಇದು ಸಂವಿಧಾನದ ಮೇಲಿನ ದಾಳಿಯಲ್ಲದಿದ್ದರೆ ಮತ್ತೇನು ಎಂದು ಪ್ರಶ್ನಿಸಿದರು.