ಬೆಂಗಳೂರು: ಸರ್ಕಾರಿ ಕಚೇರಿ ಆವರಣದ ಸುತ್ತಮುತ್ತ ಯಾವುದೇ ಮದ್ಯ ಮತ್ತು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇಂದು ವಿಧಾನಸೌಧದ ಪಶ್ಚಿಮ ಭಾಗದ ಗಾರ್ಡನ್‌ನಲ್ಲಿ ಬಿಯರ್ ಬಾಟ್ಲಿಗಳು ಬಿದ್ದಿರುವುದು ಕಂಡುಬಂದಿದೆ.
ರಾಜ್ಯ ಸರ್ಕಾರದ ಆದೇಶ ಹೊರಡಿಸಿದ ಮರುದಿನವೇ ವಿಧಾನಸೌಧ ಉದ್ಯಾನದಲ್ಲಿ ಬಿಯರ್ ಬಾಟ್ಲಿ ಪತ್ತೆಯಾಗಿದೆ.ಪೊಲೀಸರ ಕಣ್ಣು ತಪ್ಪಿಸಿ ಬಿಯರ್ ತಂದು ಗಾರ್ಡನ್‌ನಲ್ಲಿ ಸೇವಿಸಿ ನಂತರ ಬಾಟ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

