ಶಿಕ್ಷಕರ (Teachers) ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳೀಗೆ 2016 ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಕೋಲ್ಕತ್ತ ಹೈಕೋರ್ಟ್ಗೆ ರದ್ದುಗೊಳಿಸಿ ರದ್ದುಗೊಳಿಸಿ ಬಿಗ್ ಶಾಕ್ ನೀಡಿದೆ. ಈ ಮೂಲಕ ಸುಮಾರು 25, 753 ಶಿಕ್ಷಕರು ಕರ್ತವ್ಯದಿಂದ ವಜಾಗೊಂಡಿದ್ದಾರೆ. ಅವರೆಲ್ಲ ಶಿಕ್ಷಕರ ಹುದ್ದೆಯನ್ನು ಕಳೆದುಕೊಂಡಿದ್ದಾರೆ.

ಕೋರ್ಟ್ಗೆ ಆದೇಶದ ಪ್ರಕಾರ 12 ರಷ್ಟು ಬಡ್ಡಿಯೊಂದಿಗೆ ಇಲ್ಲಿಯವರೆಗೆ ತೆಗೆದುಕೊಂಡ ಸಂಬಳನ್ನು ಹಿಂದಿರುಗಿಸುವಂತೆ ಸೂಚಿಸಿದೆ. ನಾಲ್ಕು ವಾರಗಳ ಒಲಗಾಗಿ ಹಣವನ್ನು ನೀಡುವಂತೆ ಸುಚಿಸಿದೆ. ಅನರ್ಹಗೊಂಡ ಶಿಕ್ಷಕರಿಂದ ಹಣ ವಸೂಲಿ ಮಾಡುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಅಖಾಡದಿಂದ ದಿಂಗಾಲೇಶ್ವರ ಶ್ರೀ ಹಿಂದಕ್ಕೆ
ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರು ಈ ಆದೇಶ ನೀಡಿದ್ದಾರೆ. 2016ರಲ್ಲಿ ನೇಮಕಾತಿ ಪ್ರವೇಶ ಪರೀಕ್ಷೆಯ 23 ಲಕ್ಷ OMR ಹಾಳೆಗಳನ್ನು (ಪರೀಕ್ಷಾ ಪತ್ರಿಕೆ) ಮರು ಮೌಲ್ಯಮಾಪನ ಮಾಡುವಂತೆ ಪೀಠ ಆದೇಶ ನೀಡಿದೆ. ಖಾಲಿ ಔಒಖ ಹಾಳೆಗಳನ್ನು ಸಲ್ಲಿಸಿ ಕಾನೂನು ಬಾಹಿರವಾಗಿ ಶಿಕ್ಷಕರು ನೇಮಕಾತಿ ಆಗಿದೆ. ಈ ಹಗರಣದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಸಿಬಿಐ ಹಗರಣದ ತನಿಖೆಯನ್ನು ನಡೆಸಿತ್ತು. ಇದನ್ನೂ ಓದಿ: ಪ್ರೇಯಸಿ ಮದುವೆ ದಿನವೇ ಯುವಕನ ಸಾವು : ತಲೆ ತುಂಡರಿಸಿದ್ದ ಶವ ಪತ್ತೆ

