ಬೆಳಗಾವಿ : ಸ್ಮಾರ್ಟ್ ಸಿಟಿ ಯೋಜನೆಯಡಿ ಬಹುಪಯುಕ್ತವಾದ ಕಲಾಮಂದಿರ ಮತ್ತು ವಾಣಿಜ್ಯ ಮಳಿಗೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯ ಜತೆ ಆದಾಯ ಕೂಡ ಬರಲಿದೆ.
ಈ ಆದಾಯವನ್ನು ನಗರದ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು.ಮಳಿಗೆಗಳನ್ನು ಹರಾಜು ಮಾಡಿ ಅದರಿಂದ ಬರುವ ಆದಾಯ ನಗರದ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ-ಕೇಂದ್ರ ಸರಕಾರಗಳು ತಲಾ ಶೇ.50 ರಷ್ಟು ಅನುದಾನವನ್ನು ಒದಗಿಸಿವೆ.ಟಿಳಕವಾಡಿ ಕಲಾಮಂದಿರ ಉದ್ಘಾಟನಾ ಸಮಾರಂಭ ಮಾಡಿದರು.
ಬೊಮ್ಮಾಯಿ ಅವರು ಇದ್ದಾಗಲೇ ಉದ್ಘಾಟನೆ ಆಗಬೇಕಿತ್ತು :
ಬೊಮ್ಮಾಯಿ ಅವರು ಇದ್ದಾಗಲೇ ಈ ವಾಣಿಜ್ಯ ಮಳಿಗೆಯ ಉದ್ಘಾಟನೆ ಆಗಬೇಕಿತ್ತು.ನೀತಿಸಂಹಿತೆ ಇದ್ದ ಕಾರಣ ಆಗಿರಲಿಲ್ಲ ಆದ ಕಾರಣ ಎರಡು ವರ್ಷದ ನಂತರ ಉದ್ಘಾಟನೆ ಆಗುತ್ತಿದೆ.
ಸ್ಮಾರ್ಟ್ ಸಿಟಿ ಅಡಿಯಲ್ಲಿ ನನ್ನ ಕ್ಷೇತ್ರದಲ್ಲಿ ಅನೇಕ ವಾಣಿಜ್ಯ ಮಳಿಗೆ, ವಿಕಲಚೇತನ ಮಕ್ಕಳಿಗೆ ಗರೀಬಿ ಪಾರ್ಕ್, ಆರ್ಟ್ ಗ್ಯಾಲರಿ, ಈ ಲೈಬ್ರರಿ, ವಿಲೇಜಸ್ ಆಫ್ ಇಂಡಿಯಾ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಸ್ಮಾರ್ಟ್ ಸಿಟಿಯಲ್ಲಿ ತಗೆದುಕೊಂಡು ಕಾಮಗಾರಿ ಮಾಡಿದ್ದು ನಮ್ಮ ಬೆಳಗಾವಿ ಸ್ಮಾರ್ಟ್ ಸಿಟಿ ಒಂದೇ..
ಇಲ್ಲಿ ಸುಮಾರು 31 ಅಂಗಡಿಗಳು ಪ್ರರಂಭವಾಗುತ್ತಿದ್ದು, ಸುಮಾರು 500 ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಆಗುತ್ತದೆ,ಟೆಂಡರ್ ಮೂಲಕ ಅಂಗಡಿಗಳನ್ನು ನೀಡುತ್ತಿದ್ದು ಟೆಂಡರ್ ಆದವರು ನಡೆಸಿಕೊಂಡು ಹೋಗುತ್ತಾರೆ.
ಇನ್ನು ಮೂರು ಕಡೆಗೆ ನಾವು ಈ ರೀತಿಯಾದ ಯೋಜನೆ ಹಾಕಿಕೊಂಡಿದ್ದೇವೆ, ಬಹುಮುಖ ಪಾರ್ಕಿಂಗ ವ್ಯವಸ್ಥೆಗಾಗಿ, ವಾಣಿಜ್ಯ ಮಳಿಗೆಗಾಗಿ, ಪಾಲಿಕೆಯಿಂದ ಸರ್ವೇ ಮಾಡಿ, ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮತ್ತಷ್ಟು ಮಳಿಗೆಗಳು ಆಗುತ್ತವೆ. ದಕ್ಷಿಣ ಬೆಳಗಾವಿ ಶಾಸಕರಾದ್ ಅಭಯ ಪಾಟೀಲ್ ವರು ಹೇಳಿದರು.
ವರದಿ. ದಯಾನಂದ. ಎಂ.
ವರದಿ. ದಯಾನಂದ. ಎಂ.

